ಭದ್ರಾವತಿ: ಹಲ್ಲು ಕೀಳಿಸಲು ಹೋದ ವ್ಯಕ್ತಿ ಕ್ಲಿನಿಕ್‌ನಲ್ಲಿ ಮೃತಪಟ್ಟಿದ್ದು, ಈಸಂಬಂಧ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಜನ್ನಾಪುರ ವಾಸಿ ಮೋಹನಮೂರ್ತಿ (40) ಮೃತಪಟ್ಟವರು.
‘ಮೋಹನಮೂರ್ತಿ ಶನಿವಾರ ಬಿ.ಎಚ್. ರಸ್ತೆಯ ದಂತ ವೈದ್ಯರಾದ ಡಾ. ದೀಪಾಕಿತ್ತೂರು ಬಳಿ ಹಲ್ಲು ಕೀಳಿಸಲು ಹೋಗಿದ್ದರು. ಡಾ. ಸತೀಶ್ ಅರಿವಳಿಕೆ ಚುಚ್ಚುಮದ್ದು ನೀಡಿದರು. ಕೆಲವೇ ಸಮಯದಲ್ಲಿ ಅವರಿಗೆ
ಹೃದಯಾಘಾತವಾಗಿದೆ’ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗಿದ್ದು, ಸಿಪಿಐ ರಾಘವೇಂದ್ರ ಕಾಂಡಿಕೆ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.