ADVERTISEMENT

ಭದ್ರಾವತಿ | ಗಾರ್ಮೆಂಟ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:06 IST
Last Updated 31 ಜನವರಿ 2024, 14:06 IST
ಮಾಚೇನಹಳ್ಳಿಯ ಶಾಹೀ ಗಾರ್ಮೆಂಟ್ಸ್ ವಿರುದ್ಧ ಕ್ರಮ ತೆಗೆದುಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಕೆರೆ ಸಮಿತಿ ಸದಸ್ಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದರು
ಮಾಚೇನಹಳ್ಳಿಯ ಶಾಹೀ ಗಾರ್ಮೆಂಟ್ಸ್ ವಿರುದ್ಧ ಕ್ರಮ ತೆಗೆದುಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಕೆರೆ ಸಮಿತಿ ಸದಸ್ಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದರು   

ಭದ್ರಾವತಿ: ಮಾಚೇನಹಳ್ಳಿಯ ಶಾಹೀ ಗಾರ್ಮೆಂಟ್ಸ್‌ನಿಂದ ಭದ್ರಾ ಅಚ್ಚುಕಟ್ಟು ಕೆರೆಗಳಿಗೆ ಕಲುಷಿತ ನೀರು ಹರಿದು ಬಂದು ಮೀನುಗಳು ಸಾವನ್ನಪ್ಪಿದ ಬೆನ್ನಲ್ಲೇ, ಗ್ರಾಮಸ್ಥರು ಮತ್ತು ಕೆರೆ ಸಮಿತಿ ಸದಸ್ಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಜ.28ರಂದು ಶಾಹೀ ಗಾರ್ಮೆಂಟ್ಸ್‌ನಿಂದ ಹರಿದು ಕಲುಷಿತ ನೀರು ಭದ್ರಾ ಎಡದಂಡೆ ನಾಲೆಯ ಮೂಲಕ ಮಲವಗೊಪ್ಪದ ಕೆರೆ ಸೇರಿದ್ದರಿಂದ ಮೀನುಗಳು ಸಾವನ್ನಪ್ಪಿದ್ದವು ಎಂದು ಗ್ರಾಮಸ್ಥರು ದೂರಿದ್ದಾರೆ. ಮೀನುಗಳ ಸಾವಿಗೆ ಗಾರ್ಮೆಂಟ್ಸ್‌ನಿಂದ ಹರಿದ ಕಲುಷಿತ ನೀರೇ ಕಾರಣ ಎಂದು ಆರೋಪಿಸಿದ್ದಾರೆ.

ಮಲವಗೊಪ್ಪದ ಕೆರೆಯಲ್ಲಿ 70 ಸಾವಿರ ಮೀನು ಸಾಕಾಣಿಕೆ ಮಾಡಲಾಗಿತ್ತು. ಗ್ರಾಮಸ್ಥರೇ ನಿರ್ಮಿಸಿರುವ ಕೆರೆ ಇದಾಗಿದ್ದು, ಇಲ್ಲಿ ಗುತ್ತಿಗೆ ಮೂಲಕ ಸುರೇಶ್ ಮತ್ತು ವೀರೇಶ್ ಎಂಬವರು ಮೀನು ಸಾಕಣೆಯ ಟೆಂಡರ್ ಪಡೆದಿದ್ದರು. 

ADVERTISEMENT

ಕಲುಷಿತ ನೀರು ಹರಿದಿದ್ದರಿಂದ ಮೀನು ಸಾಕಾಣಿಕೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಹಾಗಾಗಿ ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮತ್ತು ಕೆರೆ ಸಮಿತಿ ಸದಸ್ಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.