ADVERTISEMENT

ಜಾರಿಕಿಹೊಳಿ ವಿರುದ್ಧ ತನಿಖೆಯಾಗಲಿ: ಪ್ರಮೋದ್ ಮುತಾಲಿಕ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 7:23 IST
Last Updated 8 ನವೆಂಬರ್ 2022, 7:23 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಸೊರಬ: ‘ಹಿಂದೂ’ ಭಾರತೀಯ ಪದವೇ ಅಲ್ಲ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರವಾಗಿ ಖಂಡಿಸಿದರು.

ಸೊಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತೀಯ ಪದಗಳ ಪರಿಚಯವಿಲ್ಲದ ಜಾರಕಿಹೊಳಿ ಸುಮ್ಮನೆ ಟೀಕಿಸುವುದು ಉತ್ತಮ ಬೆಳವಣಿಗೆಯಲ್ಲ. ‘ಹಿಂದೂ’ ಎನ್ನುವ ಪದ ಪರ್ಷಿಯನ್ ಅರೆಬಿಕ್ ಎಂದಿರುವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಹಿಂದೂ ಪದದಲ್ಲಿ ಅಶ್ಲೀಲ ಇದೆ. ಇದನ್ನು ಬಲವಂತದಿಂದ ಹೇರಬೇಡಿ’ ಎಂದು ಸತೀಶ್ ಜಾರಕಿಹೊಳಿ ಹೇಳಿರುವುದು ಖಂಡನೀಯ. ನಾವೆಂದಿಗೂ ಹಿಂದೂ ಪರವಿರುವಂತೆ ಯಾರ ಮೇಲೂ ಬಲವಂತ ಮಾಡುತ್ತಿಲ್ಲ. ‘ಹಿಂದೂ’ ಎಂಬ ಪದವನ್ನು ಕುವೆಂಪು ಅವರ ಸಾಹಿತ್ಯದಲ್ಲಿ, ಬೃಹಸ್ಪತಿಗಳ ಗ್ರಂಥ ಸೇರಿ ಅನೇಕ ಕಾವ್ಯ, ಬರಹ, ಸಾಹಿತ್ಯಗಳಲ್ಲಿಯೂ ಉಲ್ಲೇಖಿಸಲಾಗಿದೆ. ‘ಹಿಂದೂ’ ಪದದ ಬಗ್ಗೆ ಚರ್ಚೆಯಾಗಲಿ ಎಂದು ಜಾರಕಿಹೊಳಿ ಹೇಳಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.

ADVERTISEMENT

ಕೆ.ಪಿ. ಹೇಮರಾಜ ಪಾಟೀಲ್, ರವಿ ಗುಡಿಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.