ADVERTISEMENT

ಡಸ್ಟ್ ಸಿಟಿ’ಯಾಗುತ್ತಿರುವ ಶಿವಮೊಗ್ಗ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 13:04 IST
Last Updated 7 ಡಿಸೆಂಬರ್ 2019, 13:04 IST

ಶಿವಮೊಗ್ಗ: ‘ಸ್ಮಾರ್ಟ್‌ಸಿಟಿ ಆಗಬೇಕಿದ್ದ ಶಿವಮೊಗ್ಗಡಸ್ಟ್ ಸಿಟಿಯಾಗಿ ರೂಪಾಂತರಗೊಂಡಿದೆ’ ಎಂದು ಮಾನವಹಕ್ಕುಗಳಸಮಿತಿ ಅಧ್ಯಕ್ಷಕೆ.ನಾಗರಾಜ್, ರಾಷ್ಟ್ರೀಯ ಹಿಂದೂಸ್ತಾನ್ ಸೇನೆ ಜಿಲ್ಲಾ ಸಂಚಾಲಕಶ್ರೀಕಾಂತ್ ಜಿ. ಭಟ್ ದೂರಿದರು.

ಕಾಮಗಾರಿಗಳು ಗೊಂದಲದ ಗೂಡಾಗಿವೆ. ಚೆನ್ನಾಗಿರುವ ಬಾಕ್ಸ್ ಚರಂಡಿ, ರಸ್ತೆ ಒಡೆದುಹಾಕಲಾಗಿದೆ.ರಸ್ತೆಯುದ್ದಕ್ಕೂತೋಡಿದ ಗುಂಡಿಗಳಲ್ಲಿಹಲವರುಬಿದ್ದು ಗಾಯಗೊಂಡಿದ್ದಾರೆ. ಬೈಕ್ ಸವಾರನೊಬ್ಬರುಕಾಲು ಮುರಿದುಕೊಂಡಿದ್ದಾರೆ.ಪ್ರಾಣಿಗಳೂ ಕಾಲು ಮುರಿದುಕೊಂಡಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿಯ ಯಾವ ಮಾಹಿತಿಯನ್ನೂ ಅಧಿಕಾರಿಗಳು ನೀಡುತ್ತಿಲ್ಲ. ಗುತ್ತಿಗೆದಾರ ಯಾರು ಬಹಿರಂಗ ಪಡಿಸುತ್ತಿಲ್ಲ. ವಿವಿಧ ಇಲಾಖೆಗಳ ಜತೆ ಸಮನ್ವಯವೂ ಇಲ್ಲ. ಕಾಂಕ್ರೀಟ್ ರಸ್ತೆಗಳನ್ನೂ ಒಡೆದುಹಾಕುತ್ತಿದ್ದಾರೆ. ಒಂದು ರಸ್ತೆಯಲ್ಲಿ ನಾಲ್ಕುಗುಂಡಿಗಳನ್ನು ತೆಗೆಯುವ ಬದಲು ಒಮ್ಮೆ ಗುಂಡಿ ತೋಡಿ ಎಲ್ಲಾ ಪೈಪ್‌ಗಳನ್ನು ಹಾಕಬಹುದು. ಯೋಜನೆಯ ಹಣ ಲೂಟಿ ಮಾಡಲುಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಗುಂಡಿ, ದೂಳಿನಿಂದ ಇಡೀ ಶಿವಮೊಗ್ಗ ಜನರು ಶ್ವಾಸಕೋಶದ ಕಾಯಿಲೆ ತುತ್ತಾಗಿದ್ದಾರೆ. ಹಿಡಿಶಾಪ ಹಾಕುತ್ತಿದ್ದಾರೆ.ಸ್ಮಾರ್ಟ್‌ಸಿಟಿಯ ಅಧಿಕಾರಿಗಳು ಇತರೆ ಯಾವುದೇ ಇಲಾಖೆಯಜತೆಸಮನ್ವಯ ಸಾಧಿಸಿಲ್ಲ.ಸಹಭಾಗಿತ್ವ ಸಭೆ ನಡೆಸಿಲ್ಲ.ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಾರದ ಒಳಗೆ ಕಾಮಗಾರಿಗಳ ವಿವರ ನೀಡಬೇಕು. ಅಂಕಿ-ಅಂಶ ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕು. ಚರಂಡಿಗೆ ಬಿದ್ದು ಗಾಯಗೊಂಡ ಗರ್ಭಿಣಿಗೆ ಮಹಿಳೆಗೆ ಪರಿಹಾರ ನೀಡಬೇಕುಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾನವಹಕ್ಕುಗಳಸಮಿತಿರಾಜ್ಯ ಮಾಧ್ಯಮ ಸಲಹೆಗಾರ ಎಸ್.ಕೆ.ಗಜೇಂದ್ರಸ್ವಾಮಿ, ಸಂಚಾಲಕ ವೀರೇಶ್ ಚಿತ್ತರಗಿ, ಪದಾಧಿಕಾರಿಗಳಾದ ಮಂಜು ನಾಯ್ಡು, ವೆಂಕಟೇಶ್, ರಮೇಶ್, ಮಂಜುನಾಥ್ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.