ADVERTISEMENT

ಕೊಳೆಗೇರಿಗಳಿಗೆ ಮನೆ ಮಾಲೀಕತ್ವ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 14:42 IST
Last Updated 2 ಮಾರ್ಚ್ 2020, 14:42 IST

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ54 ಘೋಷಿತ ಕೊಳಚೆ ಪ್ರದೇಶಗಳಲ್ಲಿನೆಲೆ ನಿಂತಿರುವ8ಸಾವಿರ ಕುಟುಂಬಗಳಿಗೆ ಮನೆಗಳ ಮಾಲೀಕತ್ವ ನೀಡಬೇಕು ಎಂದು ಕಾಂಗ್ರೆಸ್ಮುಖಂಡಬಿ.ಎ.ರಮೇಶ್ ಹೆಗ್ಡೆ ಒತ್ತಾಯಿಸಿದರು.

2012ರಲ್ಲಿಸರ್ಕಾರಿ ಭೂಮಿಯಕೊಳಚೆ ಪ್ರದೇಶಗಳ 2,741 ಮನೆಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ಹಕ್ಕುಪತ್ರ ನೀಡಿತ್ತು. ಉಳಿದ 3,219 ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಪಾಲಿಕೆ ಚುನಾವಣೆಸಮಯದಲ್ಲಿಬಿಜೆಪಿ ಹಕ್ಕುಪತ್ರ ನೀಡುವ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಹಕ್ಕುಪತ್ರ ನೀಡಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

2019ರಲ್ಲಿ ಸುಮಾರು 8 ಕೊಳಚೆ ಪ್ರದೇಶಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.ಅಲ್ಲಿನ ನಿವಾಸಿಗಳಿಗೆ ಮಂಡಳಿಯಿಂದ ಕೊಳಚೆ ನಿವಾಸಿಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ಪಟ್ಟಿ ನೀಡಬೇಕು. 600 ಮನೆಗಳಿಗೆ ಪರಿಚಯ ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

2012ರಲ್ಲಿ ಕೊಳಚೆ ನಿವಾಸಿಗಳಿಗೆ ನೀಡಿರುವ 2741 ಮನೆಗಳ ಖಾತೆ ಮಾಡಬೇಕು.ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಬೇಕು. ಅಮೀರ್‌ ಅಹಮದ್ ಕಾಲೊನಿ ಎರಡನೇ ಹಂತ ಹಾಗೂ ಕರ್ಲಹಟ್ಟಿ ಕೊಳಚೆ ಪ್ರದೇಶದ 41 ಮನೆಗಳಿಗೆ, ಡಾ.ಅಂಬೇಡ್ಕರ್ ಕಾಲೊನಿ, ಜನತಾ ಕಾಲೊನಿ, ಸತ್ಯ ಹರಿಶ್ಚಂದ್ರ ನಗರ, ಕೆಳಗಿನ ತುಂಗಾನಗರ ಎರಡನೇ ಹಂತ, ಇಮಾಮ್ ಬಾಡಾ, ಸಿದ್ದೇಶ್ವರ ನಗರದ 600 ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದುಆಗ್ರಹಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಅಡಿ ಸುಭಾಷ್‌ ನಗರ,ಶಾಂತಿನಗರ ಹಾಗೂ ಇತರೆ ಕೊಳಚೆ ಪ್ರದೇಶಗಳ 650 ಮನೆಗಳ ನಿರ್ಮಾಣ ಕಾಮಗಾರಿ ಬ್ಯಾಂಕ್‌ ವತಿಯಿಂದಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡಿಸಬೇಕು.ಮನೆಗಳ ಕಾಮಗಾರಿ ಪೂರ್ಣಗೊಳಿಸಿ,ಹಸ್ತಾಂತರಿಸಬೇಕು ಎಂದುಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಡಿತ್ ವಿಶ್ವನಾಥ್‌,ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಆರ್.ಸಿ. ನಾಯಕ್, ಮಂಜುಳಾ ಶಿವಣ್ಣ, ಯಮುನಾ, ಶಾಮೀರಾ ಖಾನ್,ಮೆಹಕ್ ಷರೀಫ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.