ADVERTISEMENT

ಸೋಂಕು ನಿಯಂತ್ರಣ ವಿಫಲ: ಪ್ರಗತಿಪರರ ಆರೋಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 8:18 IST
Last Updated 6 ಆಗಸ್ಟ್ 2020, 8:18 IST

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಿಯಂತ್ರಿಸುವಲ್ಲಿ ಸರ್ಕಾರವಿಫಲವಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲೂ ಆರೈಕೆ ಕೇಂದ್ರಆರಂಭಿಸಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು.

ಮುಖ್ಯಮಂತ್ರಿ ತವರು ಜಿಲ್ಲೆಯನ್ನೇ ಕೊರೊನಾ ಆವರಿಸಿಕೊಂಡಿದೆ. ನಿತ್ಯವೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ಸೂಕ್ತಸೌಲಭ್ಯಗಳಿಲ್ಲ. ಜಿಲ್ಲೆಯ48 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಸೌಲಭ್ಯಗಳ ಕೊರತೆ ಕಾರಣ ಎಂದು ಒಕ್ಕೂಟದ ಕೆ.ಪಿ.ಶ್ರೀಪಾಲ್, ಕೆ.ಟಿ.ಗಂಗಾಧರ್, ಎಂ.ಗುರುಮೂರ್ತಿ, ಚಾರ್ವಕ ರಾಘು, ಶಶಿ ಸಂಪಳ್ಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಂಕ್ರಾಮಿಕ ರೋಗಗಳು ಬಂದಾಗ ಜನರಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುವುದುಸರ್ಕಾರದ ಕರ್ತವ್ಯ. ಆದರೆ,ಸರ್ಕಾರಸಾವಿನ ಪ್ರಮಾಣ ಮತ್ತು ಗುಣಮುಖರಾಗುವವರ ಅಂಕಿ,ಅಂಶ ತೋರಿಸಿ ಜನರ ದಿಕ್ಕುತಪ್ಪಿಸುತ್ತಿದೆ. ಪ್ರತಿ ರೋಗಿಗೆ ಸರ್ಕಾರ ತೋರಿಸುವ ವೆಚ್ಚಕ್ಕೂ ಖರ್ಚು ಮಾಡುತ್ತಿರುವ ಹಣಕ್ಕೂ ಭಾರಿವ್ಯತ್ಯಾಸವಿದೆಎಂದು ಆರೋಪಿಸಿದರು.

ADVERTISEMENT

ಚಾರ್ವಕ ರಾಘು ಮಾತನಾಡಿ, ಅವೈಜ್ಞಾನಿಕ ಸೀಲ್‌ಡೌನ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೊರೊನಾ ಸಂಕಷ್ಟವನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕೆ.ಟಿ.ಗಂಗಾಧರ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂತವರೇಸರ್ಕಾರಿಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸರ್ಕಾರಿಆಸ್ಪತ್ರೆಗಳ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಮಾತ್ರ ಬದುಕಿ ಬರಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್, ಟಿ.ಆರ್. ಕೃಷ್ಣಪ್ಪ, ಸುರೇಶ್, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.