ADVERTISEMENT

ಜನ್ನಾಪುರ ಮದ್ಯದಂಗಡಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 11:30 IST
Last Updated 21 ನವೆಂಬರ್ 2020, 11:30 IST

ಶಿವಮೊಗ್ಗ: ಭದ್ರಾವತಿ ಜನ್ನಾಪುರದ ಮದ್ಯದಂಗಡಿ ಸ್ಥಳಾಂತರಿಸಬೇಕು ಎಂದು ಕರ್ನಾಟಕ ಜನಸೈನ್ಯದ ಅಧ್ಯಕ್ಷ ಕೆ.ಮಂಜುನಾಥ್ ಆಗ್ರಹಿಸಿದರು.

ಈ ಮದ್ಯದಂಗಡಿಅಂತರಘಟ್ಟಮ್ಮ ದೇವಸ್ಥಾನದಿಂದ 5 ಮೀಟರ್ ದೂರದಲ್ಲಿದೆ. ಮದ್ಯ ಸೇವಿಸುವವರಿಗೆ ನಲ್ಲಿ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಜಾಗದ ವ್ಯವಸ್ಥೆ ಅಲ್ಲಿಯೇ ಮಾಡಿದ್ದಾರೆ. ಅದಕ್ಕಾಗಿ ಸಾರ್ವಜನಿಕ ನಲ್ಲಿಗಳನ್ನು ಬಳಸಿಕೊಂಡಿರುತ್ತಾರೆ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಮದ್ ಯವ್ಯಸನಿಗಳಿಂದ ಕಿರಿಕಿರಿಯಾಗುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಅಬಕಾರಿ ಕಾಯ್ದೆ ಪ್ರಕಾರ ದೇವಸ್ಥಾನದ ಬಳಿ ಮದ್ಯದಂಗಡಿ ಇರಬಾರದು ಎಂದು ನಿಯಮವಿದೆ. ಆದರೂ, ಅಬಕಾರಿ ಇಲಾಖೆ ಅನುಮತಿ ನೀಡಿದೆ. ಬೇರೆಡೆಗೆ ಸ್ಥಳಾಂತರಿಸಲು ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಾಂತರಕ್ಕೆ ಆಗ್ರಹಿಸಿ ಡಿ.8ರಂದು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಬಿ.ಎನ್.ರಾಜು, ಹನುಮಮ್ಮ, ಅನಿಲ್‌, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.