ADVERTISEMENT

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಿ; ಕಲ್ಲೂರು ಮೇಘರಾಜ್

-

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:15 IST
Last Updated 3 ಜುಲೈ 2025, 15:15 IST

ಶಿವಮೊಗ್ಗ: ‘ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಎರಡು ವರ್ಷಗಳಾದರೂ ನಿಲ್ದಾಣಕ್ಕೆ ಯಾವ ಹೆಸರನ್ನೂ ಇಟ್ಟಿಲ್ಲ. ಈ ಹಿಂದೆ ತೀರ್ಮಾನಿಸಿದಂತೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೇ ಇಡಬೇಕು’ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಈ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಬೇಕು ಎಂಬ ಕೂಗು ಕೇಳಿಬಂದಿತ್ತು. ಆಗ ಯಡಿಯೂರಪ್ಪನವರೇ ತಮ್ಮ ಹೆಸರು ಬೇಡ, ಕುವೆಂಪು ಅವರ ಹೆಸರಿಡಿ ಎಂದು ಸೂಚನೆ ಕೊಟ್ಟಿದ್ದರು. ರಾಜ್ಯ ಸರ್ಕಾರ ಕೂಡ ಕುವೆಂಪು ಅವರ ಹೆಸರಿಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೂ ಇದುವರೆಗೂ ಯಾವ ಹೆಸರೂ ಇಟ್ಟಿಲ್ಲ ಎಂದರು.

ADVERTISEMENT

ಕುವೆಂಪು ಅವರ ಹೆಸರು ಇಡುವುದು ಬಹಳ ಸೂಕ್ತ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿಯನ್ನೇ ವಹಿಸಿಲ್ಲ ಎಂದು ದೂರಿದರು.
 
ಟ್ರಸ್ಟ್‌ನ ಪ್ರಮುಖರಾದ ಜನಮೇಜಿರಾವ್, ವೇದಾಂತಗೌಡರು, ನಾಗರತ್ನಮ್ಮ, ಕೋಡ್ಲು ಶ್ರೀಧರ್, ಶಂಕ್ರಾನಾಯ್ಕ, ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.