ADVERTISEMENT

'ಸಿನಿಮಾ– ರಂಗಭೂಮಿ ಕ್ಷೇತ್ರಕ್ಕೆ ಶಂಕರ್‌ನಾಗ್ ಕೊಡುಗೆ ಅಪಾರ'

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:24 IST
Last Updated 9 ನವೆಂಬರ್ 2023, 16:24 IST
ಶಿಕಾರಿಪುರದ ಮಂಜುನಾಥ ನಾಟ್ಯ ಸಂಘದ ರಂಗಮಂಟಪದಲ್ಲಿ ಗುರುವಾರ ಶಂಕರ್ ನಾಗ್ ಅಭಿಮಾನಿಗಳು ನಟ ದಿ.ಶಂಕರ್ ನಾಗ್ 69ನೇ ವರ್ಷದ ಜನ್ಮದಿನವನ್ನು ಅಚರಿಸಿದರು
ಶಿಕಾರಿಪುರದ ಮಂಜುನಾಥ ನಾಟ್ಯ ಸಂಘದ ರಂಗಮಂಟಪದಲ್ಲಿ ಗುರುವಾರ ಶಂಕರ್ ನಾಗ್ ಅಭಿಮಾನಿಗಳು ನಟ ದಿ.ಶಂಕರ್ ನಾಗ್ 69ನೇ ವರ್ಷದ ಜನ್ಮದಿನವನ್ನು ಅಚರಿಸಿದರು   

ಶಿಕಾರಿಪುರ: ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನಟ ದಿವಂಗತ ಶಂಕರ್ ನಾಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ವೈಭವ್ ಬಸವರಾಜ್ ಶ್ಲಾಘಿಸಿದರು.

ಪಟ್ಟಣದ ಮಂಜುನಾಥ ನಾಟ್ಯ ಸಂಘದ ರಂಗಮಂಟಪದಲ್ಲಿ ಶಂಕರ್‌ನಾಗ್ ಅಭಿಮಾನಿಗಳ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಶಂಕರ್‌ನಾಗ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಸತ್ತ ಮೇಲೂ ಜನತೆ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಬೇಕು. ರಂಗಭೂಮಿ ಕ್ಷೇತ್ರದ ಮೂಲಕ ಶಂಕರ್‌ನಾಗ್ ರಾಜ್ಯಕ್ಕೆ ಪರಿಚಯವಾದರು. ನಟರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅತಿ ಕಡಿಮೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಉತ್ತಮ ಹೆಸರು ಪಡೆದಿದ್ದರು’ ಎಂದರು.

ADVERTISEMENT

ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ವಿಠ್ಠಲ್ ಮಹೇಂದ್ರಕರ್, ಕೃಷ್ಣಮೂರ್ತಿ, ಸುರೇಶ್ ಹೂವಿನಮಂಡಿ, ಎಸ್.ಎಸ್.ರಾಘವೇಂದ್ರ, ಶ್ರೀನಿವಾಸನಾಯ್ಡು, ಚಂದ್ರು, ಬೆಣ್ಣೆ ಪ್ರವೀಣ್, ಯು.ರಾಜು, ವೀರನಗೌಡ, ವಿನಯ್, ಸಿದ್ದನಗೌಡ, ಮಂಜು, ಕಾರ್ತಿಕ್, ಜೆ.ಎಸ್.ಮಂಜುನಾಥ್, ಹದಡಿ ಪ್ರವೀಣ್, ಡಿ.ಕೆ.ಪ್ರವೀಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.