ಶಿವಮೊಗ್ಗ: ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಅಮಾನತು ಮಾಡಿರುವನ್ಯಾಯಬೆಲೆ ಅಂಗಡಿಮತ್ತೆತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಆಶ್ರಯ ಬಡಾವಣೆಯ ನಾಗರಿಕರುಶನಿವಾರ ಜಿಲ್ಲಾಧಿಕಾರಿ ಕಚೇರಿಮುಂದೆ ಪ್ರತಿಭಟನೆ ನಡೆಸಿದರು.
ಲಾಕ್‌ಡೌನ್‌ಸಮಯದಲ್ಲಿಬಡವರಿಗೆ ಉಚಿತವಾಗಿ ನೀಡಿದ್ದ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದಮೇಲೆ ಎಫ್ಐಆರ್ ದಾಖಲಾಗಿತ್ತು. ತಪಾಸಣೆಗೆ ಬಂದ ಅಧಿಕಾರಿಗಳ ಜತೆಯೂ ಅನುಚಿತವಾಗಿ ವರ್ತಿಸಿದ್ದರು. ಅಂಗಡಿ ಮಾಲೀಕರಅವ್ಯವಹಾರಗಳವಿರುದ್ಧಅಧಿಕಾರಿಗಳಿಗೆ ದೂರು ಕೊಟ್ಟವರಿಗೆ ಬೆದರಿಕೆ ಹಾಕಿದ್ದರು. ಹಾಗಾಗಿ, ಇಂತಹ ಅಂಗಡಿಗೆ ಮತ್ತೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಆಶ್ರಯ ಬಡಾವಣೆಯ ಪುರುಷೋತ್ತಮ್, ಸುರೇಶ್,ಸುಬ್ರಹ್ಮಣ್ಯ, ಕುಮಾರ, ಮಧು, ಮಲ್ಲಿಕಾರ್ಜುನ,ಶ್ರೀನಿವಾಸ್ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.