ADVERTISEMENT

ನಾಗರನಿಂದ ಮರಿಗಳ ಸಂರಕ್ಷಿಸಿದ ನಾಯಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:27 IST
Last Updated 11 ಏಪ್ರಿಲ್ 2019, 7:27 IST
ಹಾವಿನ ದಾಳಿಯಿಂದ ರಕ್ಷಿಸಲು ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ತಂದು ಬಿಡುತ್ತಿರುವ ತಾಯಿ ನಾಯಿ.
ಹಾವಿನ ದಾಳಿಯಿಂದ ರಕ್ಷಿಸಲು ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ತಂದು ಬಿಡುತ್ತಿರುವ ತಾಯಿ ನಾಯಿ.   

ಶಿವಮೊಗ್ಗ:ಅದು ಮನ ಕಲಕುವ ಸನ್ನಿವೇಶ. ಹೊನ್ನಾಳಿ ರಸ್ತೆಯ ರೈಲ್ವೆ ಮೇಲು ಸೇತುವೆ ಕೆಳಗಿನ ಚೌಡಮ್ಮ ಕಾಲೊನಿ ಬಳಿ ನಾಯಿಯೊಂದು ಈಚೆಗೆ ಮರಿ ಹಾಕಿತ್ತು. ಜಾಲಿಪೊದೆಗಳ ಬೀಡಾದ ಆಪ್ರದೇಶಕ್ಕೆ ಮಂಗಳವಾರ ನಾಗರ ಹಾವೊಂದು ಬಂದಿದೆ.

ಹಾವನ್ನು ಗಮನಿಸಿದ ತಾಯಿ, ಅದನ್ನು ಹೆದರಿಸುತ್ತಲೇ ತಕ್ಷಣ ಅಲ್ಲಿಂದ ಒಂದೊಂದೇ ಮರಿಯನ್ನು ಎತ್ತಿಕೊಂಡು ಜನ ಸಂದಣಿ ಇರುವ ಪ್ರದೇಶಕ್ಕೆ ಬಿಟ್ಟಿದೆ. ಅಷ್ಟರಲ್ಲಿ ಒಂದು ಮರಿಗೆ ಹಾವು ಕಚ್ಚಿದೆ. ಸ್ಥಳದಲ್ಲೇ ಮೃತಪಟ್ಟ ಅದನ್ನು ನುಂಗಲು ಪ್ರಯತ್ನಿಸಿದೆ. ನಾಯಿಯ ಗೋಳಾಟ ಕೇಳಿದ ಸ್ಥಳೀಯರು ಸ್ನೇಕ್‌ ಕಿರಣ್‌ಗೆ ಹೇಳಿ ಹಾವು ಹಿಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT