ADVERTISEMENT

ಕಾರ್ಮಿಕರ ಮೇಲೆ ಲಾಕ್‌ಡೌನ್ ದುಷ್ಪರಿಣಾಮ

ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ (ಎಂ) ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 14:22 IST
Last Updated 16 ಜೂನ್ 2020, 14:22 IST
ಶಿವಮೊಗ್ಗದಲ್ಲಿ ಮಂಗಳವಾರ ಸಿಪಿಐ(ಎಂ) ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಸಿಪಿಐ(ಎಂ) ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಕೇಂದ್ರಸರ್ಕಾರ ಕೊರೊನಾವೈರಸ್‌ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್‌ಡೌನ್‌ ದುಷ್ಪರಿಣಾಮ ಎದುರಿಸಲು ಸೂಕ್ತಕ್ರಮಕೈಗೊಂಡಿಲ್ಲಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ಮಂಗಳವಾರಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ಮಿಕರಿಗೆ ಕೆಲಸ, ಆಹಾರ, ವಸತಿ ಪೂರೈಸುವ ಬದಲು, ಉದ್ಯೋಗ ಕಡಿತ, ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನುಜಾರಿಗೊಳಿಸಲು ಮುಂದಾಗಿದೆ. ಕಾರ್ಮಿಕ ಕಾನೂನುಗಳನ್ನೇನಾಶ ಮಾಡಲುಹೊರಟಿದೆ. ನೊಂದ ಕುಟುಂಬಗಳಿಗೆ ಪರಿಹಾರವನ್ನೂನೀಡಲಿಲ್ಲ ಎಂದು ಆರೋಪಿಸಿದರು.

ಕೊರೊನಾ ದಾಳಿ ತಡೆಯುವ ಪ್ರಧಾನಿ ಮೋದಿ ಸಾಧನೆಗೆ ವಿಶ್ವಮಾನ್ಯತೆ ದೊರೆತಿದೆ ಎಂದು ಮಾಧ್ಯಮಗಳ ಮೂಲಕವಿಜೃಂಭಿಸಲಾಗುತ್ತಿದೆ.ಮೋದಿ ಅಸಾಧಾರಣ ಆಡಳಿತ ವೈಖರಿಗೆಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದುಬಿಂಬಿಸಲಾಗುತ್ತಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹೊಟ್ಟೆಪಾಡಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಲಕ್ಷಾಂತರ ಕಾರ್ಮಿಕರು ವಲಸೆ ಬಂದಿದ್ದರು.ಯಾವುದೇ ಮೂನ್ಸೂಚನೆ ಇಲ್ಲದ ಲಾಕ್‌ಡೌನ್‌ಘೋಷಣೆ ಮಾಡಿದಪರಿಣಾಮ ಕೆಲಸ ಕಳೆದುಕೊಂಡರು.ಯಾವುದೇ ಆದಾಯವಿಲ್ಲದೆ ಬೀದಿಪಾಲಾದರು. ಇದು ಪೂರ್ವ ತಯಾರಿ ಇಲ್ಲದೆ ದೇಶದ ಮೇಲೆ ಲಾಕ್‌ಡೌನ್‌ಹೇರಿದಪರಿಣಾಮ ಎಂದು ದೂರಿದರು.

ಪ್ರತಿ ಕಾರ್ಮಿಕಕುಟುಂಬಗಳಿಗೆ ತಿಂಗಳಿಗೆ₨ 7,500ರಂತೆ ಆರು ತಿಂಗಳುನೆರವು ನೀಡಬೇಕು. ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಬೇಕು. ಉದ್ಯೋಗ ಖಾತ್ರಿಯಲ್ಲಿ ವರ್ಷಕ್ಕೆ200 ದಿನಗಳ ಉದ್ಯೋಗ ನೀಡಬೇಕು. ನಗರದ ಬಡವರಿಗೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು.ನಿರುದ್ಯೋಗಿಗಳಿಗೆ ಭತ್ಯೆನೀಡಬೇಕು ಎಂದು ಆಗ್ರಹಿಸಿದರು.

ಕಮ್ಯುನಿಸ್ಟ್ ಮುಖಂಡರಾದ ಎಂ.ನಾರಾಯಣ, ಮುಖಂಡರಾದ ಎಸ್.ಬಿ.ಶಿವಶಂಕರ್, ಕೆ.ಪ್ರಭಾಕರನ್, ಕೆ.ಮಂಜಣ್ಣ, ಹನುಮಮ್ಮ, ಅಕ್ಕಮ್ಮ, ಎಂ.ಅನಂತರಾಮ್, ಲಕ್ಷ್ಮೀನಾರಾಯಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.