ADVERTISEMENT

ಸಿದ್ಧಾರ್ಥ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 11:21 IST
Last Updated 2 ಆಗಸ್ಟ್ 2019, 11:21 IST
ಶಿವಮೊಗ್ಗದಲ್ಲಿ ಶುಕ್ರವಾರ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು ಉದ್ಯಮಿ ಸಿದ್ಧಾರ್ಥ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು ಉದ್ಯಮಿ ಸಿದ್ಧಾರ್ಥ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಉದ್ಯಮಿ ಸಿದ್ಧಾರ್ಥ ಸಾವಿನ ಪ್ರಕರಣ ಸಿಬಿಐಗೆವಹಿಸಬೇಕುಎಂದು ಆಗ್ರಹಿಸಿ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಉದ್ಯಮಿ ಸಿದ್ದಾರ್ಥ ಸರಳ ಸ್ವಭಾವದವರು. ಕನ್ನಡಿಗರಿಗೆ ಸಾವಿರಾರು ಉದ್ಯೋಗ ಸೃಷ್ಟಿಸಿದ್ದರು. ನೂರಾರು ಕೋಟಿಗಳ ಒಡೆಯ. ಅಂತಃಕರಣದ ಮನುಷ್ಯ. ಇಂಥವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದೇ ಕಷ್ಟ. ಅವರ ಸಾವಿನ ಸುತ್ತ ಹಲವು ಅನುಮಾನಗಳಿವೆ. ಈ ಕುರತು ಸಂಪೂರ್ಣ ತನಿಖೆ ನಡೆಸಬೇಕು. ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ಸುತ್ತ ಅನುಮಾನಗಳಿವೆ. ತನಿಖೆ ಮೂಲಕ ಸತ್ಯವೂ ಹೊರತರಬೇಕು ಎಂದು ಒತ್ತಾಯಿಸಿದರು.

ADVERTISEMENT

ಫೌಂಡೇಷನ್ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ದರ್ಶನ್ ರಾಜ್, ಸಂಚಾಲಕರಾದ ಗೋಪಾಲ್, ಕಿರಣ್, ಪ್ರಹ್ಲಾದ್, ಮಹೇಂದ್ರ, ಹೇಮಂತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.