ADVERTISEMENT

ತಹಶೀಲ್ದಾರ್ ಸೇರಿ 9 ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 9:58 IST
Last Updated 11 ಡಿಸೆಂಬರ್ 2019, 9:58 IST
ಶಿವಮೊಗ್ಗದಲ್ಲಿ ಸೋಮವಾರ ಕಂದಾಯ ಇಲಾಖೆ ನೌಕರರು ಆಹಾರ ನಿರೀಕ್ಷಕ ದತ್ತಾತ್ರೇಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹೊಸನಗರ ತಹಶೀಲ್ದಾರ್ ಮತ್ತಿತರ ಸಿಬ್ಬಂದಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಸೋಮವಾರ ಕಂದಾಯ ಇಲಾಖೆ ನೌಕರರು ಆಹಾರ ನಿರೀಕ್ಷಕ ದತ್ತಾತ್ರೇಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹೊಸನಗರ ತಹಶೀಲ್ದಾರ್ ಮತ್ತಿತರ ಸಿಬ್ಬಂದಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹೊಸನಗರ ತಾಲ್ಲೂಕು ಆಹಾರ ನಿರೀಕ್ಷಕಐ.ಡಿ.ದತ್ತಾತ್ರೆಯ ಅವರ ಆತ್ಮಹತ್ಯೆಗೆ ಅಧಿಕಾರಿಗಳೇ ಕಾರಣ.ತಪ್ಪಿತಸ್ಥರ ವಿರುದ್ಧತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸರ್ಕಾರಿ ನೌಕರರ ಸಂಘ, ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಆಹಾರ ನಿರೀಕ್ಷಕ ದತ್ತಾತ್ರೇಯ ಅವರ ಆತ್ಮಹತ್ಯೆಗೆ ಹೊಸನಗರ ತಾಲ್ಲೂಕಿನ ತಹಶೀಲ್ದಾರ್ ಶ್ರೀಧರ ಮೂರ್ತಿ, ಉಪ ತಹಶೀಲ್ದಾರ್ ಜಯಪ್ಪಚಾರಿ ಸೇರಿ ಸುಮಾರು 9ಅಧಿಕಾರಿಗಳು ಕಾರಣ.ದತ್ತಾತ್ರೆಯ ಅವರುಆತ್ಮಹತ್ಯೆಗೂ ಮೊದಲು ಅವರ ವಿರುದ್ಧ ಪತ್ರ ಬರೆದಿಟ್ಟಿದ್ದಾರೆ.ಈಗಾಗಲೇ 9 ಜನರ ವಿರುದ್ಧ ಈಗಾಗಲೇಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆಪ್ರಚೋದನೆ ನೀಡಿದಈ ಎಲ್ಲರನ್ನೂಕೆಲಸದಿಂದ ಅಮಾನತುಗೊಳಿಸಬೇಕು. ತಕ್ಷಣಬಂಧಿಸಬೇಕು ಎಂದು ಆಗ್ರಹಿಸಿದರು.

ದತ್ತಾತ್ರೇಯ ಅವರಿಗೆ ಗ್ರಾಮ ಲೆಕ್ಕಿಗ ಹುದ್ದೆಯಿಂದ ಪದೋನ್ನತಿಸಿಕ್ಕಿತ್ತು. ವೇತನನೀಡಲು ತಹಶೀಲ್ದಾರ್ ಸೇರಿದಂತೆ ಕಚೇರಿಯಸಿಬ್ಬಂದಿವಿನಾಕಾರಣ ವಿಳಂಬ ಮಾಡಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ.ಮಗಳ ಮದುವೆಗೂ ರಜೆ ಕೊಟ್ಟಿರಲಿಲ್ಲ. ದತ್ತಾತ್ರೇಯ ಮೇಲೆ ದೂರು ನೀಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಆರೋಗ್ಯ ತಪಾಸಣೆಗೂ ರಜೆ ನೀಡಲಿಲ್ಲ. ಅಧಿಕಾರಿಗಳು ದಬ್ಬಾಳಿಕೆ ಮಾಡಿದ್ದಾರೆ. ಈ ಸಂಬಂಧ ಕುಟುಂಬದವರೂ ದೂರು ನೀಡಿದ್ದಾರೆ ಎಂದರು.

ADVERTISEMENT

ತಹಶೀಲ್ದಾರ್ ಅವರು ಪದೋನ್ನತಿ ಹೊಂದಿದ ನೌಕರರನ್ನು ಬಿಡುಗಡೆಗೊಳಿಸಲೂ ಲಂಚಕೇಳುತ್ತಾರೆ ಎಂಬ ಆರೋಪಗಳಿವೆ.ಇಂತಹ ಕೆಲಸಕ್ಕೆ ಶಿರಸ್ತೇದಾರ್ ಮಧ್ಯವರ್ತಿಯಾಗಿದ್ದಾರೆ. ಮಹಿಳಾ ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದಾರೆಎಂದು ದೂರಿದರು.

ಮೃತ ದತ್ತಾತ್ರೇಯ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು. ಕಿರಿಯ ಮಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿಕೆಲಸ ನೀಡಬೇಕು ಎಂದುಆಗ್ರಹಿಸಿದರು.

ರಾಜ್ಯ ಸರ್ಕಾರಿನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್, ಗ್ರಾಮ ಲೆಕ್ಕಿಗರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ನಾಯ್ಕ,ಸಂಘದ ಮುಖಂಢರಾದಕೃಷ್ಣಪ್ಪ, ಹೆಚ್.ಪಿ.ಗಣೇಶ್, ಕಂದಾಯ ನಿರೀಕ್ಷಕ ಅ.ಮ.ಶಿವಮೂರ್ತಿಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.