ADVERTISEMENT

ಅಂಬೇಡ್ಕರ್‌ಗೆ ಅಪಮಾನ: ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:13 IST
Last Updated 19 ನವೆಂಬರ್ 2019, 12:13 IST
ಶಿವಮೊಗ್ಗ ಗೋಪಿ ವೃತ್ತದಲ್ಲಿ ಮಂಗಳವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಗೋಪಿ ವೃತ್ತದಲ್ಲಿ ಮಂಗಳವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಕಾರ್ಯಕರ್ತರು ಮಂಗಳವಾರ ಗೋಪಿವೃತ್ತದಲ್ಲಿಪ್ರತಿಭಟನೆ ನಡೆಸಿದರು.

ಆಧುನಿಕ ಯುಗದಲ್ಲಿ ವಿಕೃತ ಮನಸ್ಸಿನ ಮನುವಾದಿಗಳು ದೌರ್ಜನ್ಯ ಮನೋಭಾವ ಹೊಂದಿದ್ದಾರೆ.ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಲಾಗುತ್ತಿದೆ.ಸಾಮಾಜಿಕ ಸಮಾನತೆ ಸಹಿಸದ ಮನುವಾದಿಗಳು ಕುತಂತ್ರಗಳಿಂದ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಲೆಗಳಲ್ಲಿ ಸಂವಿಧಾನ ದಿನಆಚರಿಸಲು ಸರ್ಕಾರ ಹೊರಡಿಸಿದ ಮಾರ್ಗದರ್ಶಿಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ.ಅದು ಸಾಮೂಹಿಕ ಪ್ರಯತ್ನದ ಫಲ. ಬೇರೆಬೇರೆ ಸಮಿತಿಗಳು ಬರೆದ ಸಂವಿಧಾನ ಒಟ್ಟುಗೂಡಿಸಿ, ಅಂತಿಮ ಕರಡು ತಯಾರಿಸುವ ಕೆಲಸ ಅಂಬೇಡ್ಕರ್ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.ಇದುಅಂಬೇಡ್ಕರ್ ಚಾರಿತ್ರ್ಯ ನಾಶ ಮಾಡಲು ನಡೆದ ಹುನ್ನಾರಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ನಿರ್ದೇಶಕಇದಕ್ಕೆ ನೇರ ಹೊಣೆ. ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಮುಖಂಡರಾದ ಬಿ.ಎ.ಭಾನುಪ್ರಸಾದ್, ಎಂ.ಶ್ರೀಧರ್, ಎಸ್.ರವೀಂದ್ರ, ಹರೀಶ್ ಬಾಬು, ರಾಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.