ADVERTISEMENT

ಸತ್ತ ಕುರಿ ನೇತು ಹಾಕಿ ರೈತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 6:04 IST
Last Updated 5 ಜನವರಿ 2023, 6:04 IST
ಹೊಸನಗ ಪಶು ಆಸ್ಪತ್ರೆಯಲ್ಲಿ ಸತ್ತ ಕುರಿ ನೇತು ಹಾಕಿ ರೈತ ಪ್ರತಿಭಟನೆ ಮಾಡಿದರು
ಹೊಸನಗ ಪಶು ಆಸ್ಪತ್ರೆಯಲ್ಲಿ ಸತ್ತ ಕುರಿ ನೇತು ಹಾಕಿ ರೈತ ಪ್ರತಿಭಟನೆ ಮಾಡಿದರು   

ಹೊಸನಗರ: ಪಶುವೈದ್ಯ ಸಿಬ್ಬಂದಿಯ ಕಾರ್ಯವೈಖರಿ ಖಂಡಿಸಿ ರೈತರೊಬ್ಬರು ಬುಧವಾರ ಸತ್ತ ಕುರಿಯನ್ನು ಆಸ್ಪತ್ರೆ ಕಟ್ಟಡದ ತೊಲೆಗೆ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮುತ್ತೂರು ಕೊಲ್ಲನಾಯ್ಕ ತಾವು ಸಾಕಿದ್ದ ಮೂರು ಕುರಿಗಳು ಅನಾರೋಗ್ಯ ಪೀಡಿತವಾದ ಕಾರಣ ಚಿಕಿತ್ಸೆಗಾಗಿ ದೂರವಾಣಿ ಮೂಲಕ ಪಶು ಆಸ್ಪತ್ರೆ ಸಂಪರ್ಕಿಸಿದರು. ಅಷ್ಟರಲ್ಲೇ ಹೊಟ್ಟೆ ಉಬ್ಬರಿಸಿ ಒಂದು ಕುರಿ ಮೃತಪಟ್ಟಿತು. ಮರಣೋತ್ತರ ಪರೀಕ್ಷೆಗಾಗಿ ಮಧ್ಯಾಹ್ನ 3.30ಕ್ಕೆ ಸತ್ತ ಕುರಿಯನ್ನು ರೈತ ಆಸ್ಪತ್ರೆಗೆ ತಂದರು. ಆದರೆ ಅಷ್ಟರೊಳಗೆ ಪಶುವೈದ್ಯ ಸಿಬ್ಬಂದಿ ಆಸ್ಪತ್ರೆಗೆ ಬೀಗ ಹಾಕಿ ಹೋಗಿದ್ದರು.

ಇದರಿಂದ ಆಕ್ರೋಶಗೊಂಡ ಅವರು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.