ADVERTISEMENT

ಪಶುವೈದ್ಯೆ ಪ್ರಕರಣ: ಎನ್‌ಎಸ್‌ಯುಐ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:01 IST
Last Updated 2 ಡಿಸೆಂಬರ್ 2019, 20:01 IST
ಶಿವಮೊಗ್ಗದಲ್ಲಿ ಸೋಮವಾರ ಎನ್ಎಸ್‌ಯುಐ, ಗಂಧದಗುಡಿ ಫೌಂಡೇಶನ್ ಕಾರ್ಯಕರ್ತರು ಹೈದ್ರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಸೋಮವಾರ ಎನ್ಎಸ್‌ಯುಐ, ಗಂಧದಗುಡಿ ಫೌಂಡೇಶನ್ ಕಾರ್ಯಕರ್ತರು ಹೈದ್ರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹೈದರಾಬಾದ್‌ನಲ್ಲಿಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರಎಸಗಿ, ಕೊಲೆ ಮಾಡಿದ ಘಟನೆ ಖಂಡಿಸಿ ಎನ್ಎಸ್‌ಯುಐ,ಗಂಧದಗುಡಿ ಫೌಂಡೇಶನ್ ಕಾರ್ಯಕರ್ತರು ಸೋಮವಾರಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜಸ್ತಾನದ ಜೈಪುರದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೆನಡೆಯುತ್ತಿವೆ.ಮಹಿಳಾ ಸುರಕ್ಷತೆಇಲ್ಲವಾಗಿದೆ.ಇಂತಹ ಕಾಮಾಂಧರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ತೆಲಂಗಾಣಸರ್ಕಾರ ಇಂತಹನೀಚ ಕೃತ್ಯ ತಡೆಯುವಲ್ಲಿ ವಿಫಲವಾಗಿದೆ. ಮಹಿಳೆಯರಲ್ಲಿ ಅಸುರಕ್ಷತಾಭಾವ ಕಾಡುತ್ತಿದೆ.ಕಠಿಣನಿಯಮಗಳನ್ನು ಜಾರಿಗೆ ತರಬೇಕು. ವಿಶೇಷ ನ್ಯಾಯಾಲಯ ರಚಿಸಬೇಕು, ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು.ಮಹಿಳಾ ಭದ್ರತೆಗೆವಿಶೇಷ ಮಹಿಳಾ ತಂಡ ರಚಿಸಬೇಕು. ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಎನ್ಎಸ್‌ಐರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಬಾಲಾಜಿ, ಟಿ.ವಿ.ವಿನಯ್, ವಿಜಯ್, ಆರ್.ರಘು, ಅರ್ಜುನ್‌,ಆಕಾಶ್‌, ಗಂಧದ ಗುಡಿ ಫೌಂಡೇಶನ್ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಕುಶಾಲ್, ಕಾರ್ಯದರ್ಶಿ ಆರ್.ಹೇಮಂತ್, ಬಿ.ವಿ.ಭರತ್, ಪ್ರಹ್ಲಾದ್, ಮಾರುತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.