ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಪೇಸ್ ಪಿಯು ಕಾಲೇಜಿನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
624 ವಿದ್ಯಾರ್ಥಿಗಳ ಪೈಕಿ 380 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 236 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂವರು ದ್ವಿತೀಯ ಶ್ರೇಣಿ ಪಡೆದು ಶೇ 99.2ರಷ್ಟು ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕಾಲೇಜಿನ ಎಚ್.ಎಸ್. ಶೋಭಿತ್ (594), ಎಂ.ಸಿಂಚನಾ (593), ಆರ್.ಡಿ.ಸುಜನ್ (592), ವಿ.ಎನ್. ಹರ್ಷಿತ 590, ಎ.ಜಿ. ದಿವ್ಯ (588), ಎಚ್.ಯು.ಪ್ರಾರ್ಥನಾ (587), ಎಂ.ಟಿ. ಇಂದೂಧರ್ (587), ವಿ.ಸುಬ್ರಮಣ್ಯ (586), ಪಿ. ದೀಕ್ಷಿತಾ (585) ಅಂಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.