ADVERTISEMENT

ತಳಗೇರಿ: ಪುನೀತ್ ಸ್ಮಾರಕ ಗ್ರಾಮಸ್ಥರಿಂದಲೇ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:03 IST
Last Updated 6 ಜುಲೈ 2022, 4:03 IST
ಆನಂದಪುರ ಸಮೀಪದ ತಳಗೇರಿ ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ಮಾಡಿರುವುದು
ಆನಂದಪುರ ಸಮೀಪದ ತಳಗೇರಿ ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ಮಾಡಿರುವುದು   

ಆನಂದಪುರ: ಸಮೀಪದ ತಳಗೇರಿಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ.

ಅಂದಾಜು ₹ 2 ಲಕ್ಷ ವೆಚ್ಚದಲ್ಲಿ, ಸತತ 3 ತಿಂಗಳ ಪರಿಶ್ರಮದ ಫಲವಾಗಿ ಸ್ಮಾರಕ ನಿರ್ಮಾಣವಾಗಿದೆ. ವಿದ್ಯುತ್‌ ವ್ಯವಸ್ಥೆಯುಳ್ಳ ಕಾರಂಜಿಯನ್ನು ಸಹ ಸ್ಮಾರಕದ ಮುಂದೆ ನಿರ್ಮಾಣ ಮಾಡಲಾಗಿದೆ. ಬಣ್ಣಬಣ್ಣದ ವಿದ್ಯುತ್‌ ಚಾಲಿತ ಮಾಡಿರುವುದರಿಂದ ರಾತ್ರಿ ಸಮಯದಲ್ಲಿ ಆಕರ್ಷಣೀಯವಾಗಿ ಕಾಣುತ್ತದೆ. ಸ್ಮಾರಕದ ಸುತ್ತಲೂ ಸುಂದರವಾದ ಕಟ್ಟೆಯನ್ನು ಸಹ ನಿರ್ಮಿಸಲಾಗಿದೆ.

‘ಪುನಿತ್ ಅವರ ಆದರ್ಶಗಳನ್ನು ಸದಾ ನೆನಪಿಸಿಕೊಳ್ಳುವ ಉದ್ದೇಶದಿಂದ ಸ್ಮಾರಕ ನಿರ್ಮಿಸಲಾಗಿದೆ. ಅವರು ತಮ್ಮ ಆದರ್ಶಗಳಿಂದ ಕರುನಾಡಿನಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ನಗುವಿನಲ್ಲಿ ಎಲ್ಲರ ದುಃಖ ಮರೆಯಿಸುವ ಶಕ್ತಿಯಿದೆ. ಪುನೀತ್ ಎಂದಿಗೂ ನಮ್ಮ ಮನಸಿನಲ್ಲಿ ನೆಲೆಸಿರುತ್ತಾರೆ’ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ಗ್ರಾಮಸ್ಥರಾದ ದೇವಪ್ಪ, ಮಹಬಲೇಶ, ಸೋಮಶೇಖರ್, ಕಲ್ಕರೆ ದೇವಪ್ಪ, ಹುಚ್ಚಪ್ಪ, ಪ್ರಿತಮ್, ಮಿಲನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.