ADVERTISEMENT

ಮಳೆ: 6 ಮನೆಗಳು ಕುಸಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:19 IST
Last Updated 1 ಆಗಸ್ಟ್ 2021, 1:19 IST
ಶಿವಮೊಗ್ಗ ನಗರದ ಸವರ್‌ಲೈನ್‌ ರಸ್ತೆ ಬಳಿ ಮಳೆಗೆ ಮನೆ ಬಿದ್ದಿರುವ ಸ್ಥಳಕ್ಕೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್‌ ಗನ್ನಿ ಭೇಟಿ ನೀಡಿ ಪರಿಶೀಲಿಸಿದರು.
ಶಿವಮೊಗ್ಗ ನಗರದ ಸವರ್‌ಲೈನ್‌ ರಸ್ತೆ ಬಳಿ ಮಳೆಗೆ ಮನೆ ಬಿದ್ದಿರುವ ಸ್ಥಳಕ್ಕೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್‌ ಗನ್ನಿ ಭೇಟಿ ನೀಡಿ ಪರಿಶೀಲಿಸಿದರು.   

ಶಿವಮೊಗ್ಗ: ನಗರದ ಸವರ್‌ಲೈನ್‌ ರಸ್ತೆ ಬಳಿ ಈಚೆಗೆ ಸುರಿದ ಮಳೆಯಿಂದಾಗಿ ತೇವವಾಗಿದ್ದ 6 ಮನೆಗಳು ಶನಿವಾರ ಕುಸಿದು ಬಿದ್ದಿವೆ.

ಹೂ ಮಾರಾಟಗಾರರಾದ ರಾಧಾ, ಭಾಗ್ಯಮ್ಮ, ಭಾಗ್ಯಲಕ್ಷ್ಮಿ, ನಾಗಮ್ಮ, ರಂಗಮ್ಮ, ಗಾಯತ್ರಮ್ಮ ಎಂಬುವರ ಮನೆಗಳು ಬಿದ್ದಿವೆ. ಮಕ್ಕಳು ಹೊರಗಡೆ ಹೋಗಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.

ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದರು. ಮನೆ ಮಾಲೀಕರಿಗೆ ಸಾಂತ್ವನ ಹೇಳಿ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.