ADVERTISEMENT

ಮೆಕ್ಕೆಜೋಳ, ಬಾಳೆ, ಸೂರ್ಯಕಾಂತಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 4:05 IST
Last Updated 20 ಮಾರ್ಚ್ 2022, 4:05 IST
ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಆನವಟ್ಟಿ ಸಮೀಪದ ಹುಣಸವಳ್ಳಿ ಗ್ರಾಮದ ದ್ರಾಕ್ಷಾಯಣಮ್ಮ ಅವರ ಹೊಲದಲ್ಲಿ ಬೆಳೆದ ಫಸಲಿಗೆ ಬಂದ ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿರುವುದು.
ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಆನವಟ್ಟಿ ಸಮೀಪದ ಹುಣಸವಳ್ಳಿ ಗ್ರಾಮದ ದ್ರಾಕ್ಷಾಯಣಮ್ಮ ಅವರ ಹೊಲದಲ್ಲಿ ಬೆಳೆದ ಫಸಲಿಗೆ ಬಂದ ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿರುವುದು.   

ಆನವಟ್ಟಿ: ಶುಕ್ರವಾರದ ಬಿರುಗಾಳಿ ಮಳೆಗೆ ಸಮೀಪದ ಭಾರಂಗಿ, ಹಂಚಿ, ಕುಣೆತೆಪ್ಪ ಗ್ರಾಮಗಳಲ್ಲಿ ಅಡಿಕೆ, ಬಾಳೆ, ಮೆಕ್ಕೆಜೋಳ ಬೆಳೆ ಅಪಾರ ಪ್ರಮಾಣದಲ್ಲಿ ಹಾಳಾಗಿವೆ.

ಮನೆಗಳ ಹೆಂಚು, ತೆಂಗಿನ ಮರಗಳು, ರಸ್ತೆ ಬದಿಯ ಮರಗಳು ಸಾಕಷ್ಟು ಧರೆಗೆ ಉರುಳಿವೆ. ಶನಿವಾರ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಾರಂಗಿ ಬಸಣ್ಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಆನವಟ್ಟಿ ಸುತ್ತಮುತ್ತಲ ಗ್ರಾಮಗಳಲ್ಲಿ 5 ಎಕರೆ ಅಡಿಕೆ ತೋಟ, 45 ಎಕರೆ ಬಾಳೆ ತೋಟ ಬಿರುಗಾಳಿ ಸಹಿತ ಮಳೆಗೆ ಹಾಳಾಗಿವೆ ಎಂದು ಸಹಾಯಕ ತೋಟಗಾರಿಕಾ ಇಲಾಖೆ ಅಧಿಕಾರಿ ದೇವರಾಜ್ ಅರಸ್ ತಿಳಿಸಿದ್ದಾರೆ.

ADVERTISEMENT

ಆನವಟ್ಟಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಅಂದಾಜು 200 ಎಕರೆ ಮೆಕ್ಕೆಜೋಳ, 15 ಎಕರೆ ಸೂರ್ಯಕಾಂತಿ ಬೆಳೆ ಹಾಳಾಗಿದೆ ಎಂದು ಕೃಷಿ ಅಧಿಕಾರಿ ನೇಮಿಚಂದ್ರ ಬಾಳಂಬೀಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.