ADVERTISEMENT

ತೀರ್ಥಹಳ್ಳಿಯಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:25 IST
Last Updated 9 ನವೆಂಬರ್ 2023, 16:25 IST
ತೀರ್ಥಹಳ್ಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ
ತೀರ್ಥಹಳ್ಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ   

ತೀರ್ಥಹಳ್ಳಿ: ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ಹಿಂಗಾರು ಚುರುಕುಗೊಂಡಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ ಮೂಡಿಸಿದೆ.

ಬರದ ನಡುವೆಯೂ ಪಂಪ್‌ಸೆಟ್‌ ನೀರಿನ ಮೂಲಕ ಬೆಳೆದ ಬೆಳೆ ಕೈ ಸೇರುವ ಸಮಯದಲ್ಲಿ ಧಾರಾಕಾರ ಮಳೆ ಆಗುತ್ತಿರುವುದು ಕೆಲ ರೈತರನ್ನು ಚಿಂತೆಗೀಡು ಮಾಡಿದೆ.

ಆಗುಂಬೆ, ಮೇಗರವಳ್ಳಿ, ಕಮ್ಮರಡಿ, ಬಿದರಗೋಡು, ತೀರ್ಥಮುತ್ತೂರು, ರಾಮಕೃಷ್ಣಪುರ, ಬಸವಾನಿ, ದೇವಂಗಿ, ಕಟ್ಟೇಹಕ್ಕಲು, ಭಾರತೀಪುರ, ಕುಡುಮಲ್ಲಿಗೆ ಮಾಳೂರು, ಆರಗ, ಕೋಣಂದೂರು, ಅರಳಸುರಳಿ, ಮಂಡಗದ್ದೆ, ಕನ್ನಂಗಿ, ಹಣಗೆರೆಕಟ್ಟೆ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗಿದೆ. ಸಾಯಂಕಾಲದ ನಂತರ ಗುಡುಗು, ಸಿಡಿಲು ಸಹಿತ ಮುಂಜಾನೆವರೆಗೂ ಮಳೆ ಬಿಡದೆ ಮಳೆ ಸುರಿಯುತ್ತಿದೆ. ಹಗಲು ಬಿಸಿಲಿನ ಬೇಗೆ ಮುಂದುವರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.