ADVERTISEMENT

ರಂಗಾಯಣ ಅಭಿವೃದ್ಧಿಗೆ ₹2.50 ಕೋಟಿ ಪ್ರಸ್ತಾವ

25ಕ್ಕೆ ಪ್ಲಾಸ್ಟಿಕ್‌ ಸಿಟಿ ನಾಟಕ, 26ಕ್ಕೆ ಗಾಂಧಿ, ಅಂಬೇಡ್ಕರ್ ಚಲನಚಿತ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:32 IST
Last Updated 22 ಜನವರಿ 2020, 16:32 IST

ಶಿವಮೊಗ್ಗ: ಬಯಲು ರಂಗಮಂದಿರ ನಿರ್ಮಾಣ ಸೇರಿದಂತೆ ರಂಗಾಯಣದ ಅಭಿವೃದ್ಧಿಗೆ ₨ 2.50 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಹೇಳಿದರು.

ಬದಲಾದ ಯೋಜನಾ ವೆಚ್ಚದ ಪರಿಣಾಮ ಬಯಲು ರಂಗಮಂದಿರ ನಿರ್ಮಾಣ ನನೆಗುದಿಗೆ ಬಿದ್ದಿತ್ತು.₨ 50 ಲಕ್ಷ ಅನುದಾನ ಲಭ್ಯವಿದೆ. ಒಟ್ಟು1.35 ಕೋಟಿಅಗತ್ಯವಿದ್ದು, ಉಳಿದ ₨ 85 ಲಕ್ಷಅಗತ್ಯವಿದೆ. ಇಂಟಿಮೇಟ್ ಥಿಯೇಟರ್‌ಗೆ ₨ 25 ಲಕ್ಷ ಸೇರಿದಂತೆ ವಿವಿಧ ಯೋಜನೆಗಳಿಗೆ ₨ 2.5 ಕೋಟಿ ಅನುದಾನ ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ರಂಗಭೂಮಿಗೆಒತ್ತು ನೀಡಲಾಗುವುದು. ಮಕ್ಕಳ ಬೇಸಿಗೆ ಶಿಬಿರ ಅಚ್ಚುಕಟ್ಟಾಗಿ ನಿರ್ವಹಿಸಲು ಆದ್ಯತೆ ನೀಡಲಾಗುವುದು.ಶಿಕ್ಷಕರಿಗೂ 15 ದಿನಗಳ ರಂಗ ತರಬೇತಿ ಶಿಬಿರ ನಡೆಸಲಾಗುವುದು ಎಂದರು.

ADVERTISEMENT

ನಾಟಕ-ಚಲನಚಿತ್ರ ಪ್ರದರ್ಶನ:

71ನೇ ಗಣರಾಜ್ಯೋತ್ಸವದ ನೆನಪಿಗೆ ಜ.26 ರಂದು ಬೆಳಿಗ್ಗೆ 11 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಿಚರ್ಡ್‌ ಅಟೆನ್ ಬರೋ ನಿರ್ದೇಶನದ ಗಾಂಧಿ, ಸಂಜೆ 5ಕ್ಕೆ ಡಾ.ಜಬ್ಬಾರ್ ಪಟೇಲ್ ನಿರ್ದೇಶನದ ಡಾ.ಬಿ.ಆರ್. ಅಂಬೇಡ್ಕರ್ ಚಲನಚಿತ್ರಗಳ ಎರಡು ಪ್ರದರ್ಶನಆಯೋಜಿಸಲಾಗಿದೆ ಎಂದು ವಿವರ ನೀಡಿದರು.

25ರಂದು ಶಾಲಾ ಮಕ್ಕಳಿಗಾಗಿ ಬೆಳಿಗ್ಗೆ 11ಕ್ಕೆ ಹಾಗೂ 12 ರವರೆಗೆ ಸೂತ್ರಧಾರಿ ಗೊಂಬೆಯಾಟ‘ಪ್ಲಾಸ್ಟಿಕ್‌ ಸಿಟಿ’ ನಾಟಕ ಇರುತ್ತದೆ.400 ಮಕ್ಕಳಿಗೆ ಒಂದು ಪ್ರದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಇದೇ ಪ್ರದರ್ಶನ ಸಂಜೆ 6.30ಕ್ಕೆ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ. ಪ್ರವೇಶ ದರ ₨ 20ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.