ADVERTISEMENT

ಶಿವಮೊಗ್ಗದ ವಿದ್ಯಾರ್ಥಿನಿ ಅಮೃತಾಗೆ ಗಣರಾಜ್ಯೋತ್ಸವದ ಅತಿಥಿ ಗೌರವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:42 IST
Last Updated 12 ಜನವರಿ 2022, 5:42 IST
ರಚಿಸಿದ ಕಲಾಕೃತಿಯೊಂದಿಗೆ ಅಮೃತಾ ಎಸ್.
ರಚಿಸಿದ ಕಲಾಕೃತಿಯೊಂದಿಗೆ ಅಮೃತಾ ಎಸ್.   

ಹೊಳೆಹೊನ್ನೂರು: ದೇಶದಾದ್ಯಂತ ಸಿಬಿಎಸ್ಇ ಶಾಲೆಗಳ ವೀರ್‌ಗಾಥಾ ಸ್ಪರ್ಧೆಯಲ್ಲಿ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಒಬ್ಬರಾಗಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಜಾವಳ್ಳಿಯ ಜ್ಞಾನದೀಪ ಸೀನಿಯರ್‌ ಸೆಕೆಂಡರಿ ಶಾಲೆಯ ಅಮೃತಾ ಎಸ್. ಆಯ್ಕೆಯಾಗಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಗೌರವ ಪಡೆಯಲಿದ್ದಾರೆ.

‘ಗ್ಯಾಲೆಂಟ್ರಿ ಅವಾರ್ಡ್‌’ ಪ್ರಶಸ್ತಿ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಕೇಂದ್ರ ರಕ್ಷಣಾ ಇಲಾಖೆಯು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವೀರರ ಸಾಧನೆ ಕುರಿತ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿತ್ತು.

ಅಮೃತಾ ಎಸ್. 9-10ನೇ ತರಗತಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ರಕ್ಷಣಾ ಇಲಾಖೆಯು ನೀಡುವ ₹10 ಸಾವಿರ ನಗದು ಬಹುಮಾನದ ಜೊತೆಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಐಪಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ. ಹೆಗಡೆ ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.