ADVERTISEMENT

ಸರ್ಕಾರ ಬಿದ್ದರೆ ಬೀಳಲಿ, ಜಾತಿ ಗಣತಿ ಬಹಿರಂಗಗೊಳಿಸಿ: ಅಹಿಂದ ಚಳವಳಿ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:05 IST
Last Updated 9 ಅಕ್ಟೋಬರ್ 2024, 16:05 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಶಿವಮೊಗ್ಗ: ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಹಿರಂಗಗೊಳಿಸಬೇಕು’ ಎಂದು ಅಹಿಂದ ಚಳವಳಿ ಸಂಘಟನೆ ರಾಜ್ಯ ಜಂಟಿ ಸಂಚಾಲಕ ಮೊಹ್ಮದ್‌ ಸನಾವುಲ್ಲಾ ಆಗ್ರಹಿಸಿದರು. 

‘ರಾಜ್ಯದಲ್ಲಿ ಶೇ 78ರಷ್ಟು ಜನರು ಸಮೀಕ್ಷೆ ಪರವಾಗಿ ಇದ್ದಾರೆ. ಆದರೆ ಶೇ 22ರಷ್ಟು ಇರುವ ಮೇಲ್ವರ್ಗದಲ್ಲಿ ಕೆಲವು ರಾಜಕೀಯ ನಾಯಕರು ವರದಿ ವಿರೋಧಿಸುತ್ತಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪಗೆ ಗೆಲ್ಲಲು ಅಹಿಂದ ಮತಗಳು ಬೇಕು. ಆದರೆ ಜಾತಿ ಗಣತಿಗೆ ವಿರೋಧ ಮಾಡುತ್ತಿರುವುದು ಆಘಾತಕಾರಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

ಸರ್ಕಾರ ಬಿದ್ದರೆ ಬೀಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ಜಾರಿಗೊಳಿಸಬೇಕು. ಸಮೀಕ್ಷೆಯಿಂದಾಗಿ ಎಲ್ಲ ಸಮುದಾಯಗಳಿಗೆ ತುಂಬ ಅನುಕೂಲವಾಗುತ್ತದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಆದರೆ ಕೆಲವರು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗುತ್ತದೆ ಎಂದರು. 

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಧಿಕಾರಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಪರಮೇಶ್ವರಪ್ಪ ಆರೋಪಿಸಿದರು.

‘ಜಾತಿ ಗಣತಿ ಜಾರಿಯಿಂದಾಗಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿದೆ. ವರದಿ ಕುಳಿತದಲ್ಲಿಯೇ ತಯಾರು ಮಾಡಲಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದು’ ಎಂದು ಸಂಘಟನೆ ಜಿಲ್ಲಾ ಜಂಟಿ ಪ್ರಧಾನ ಸಂಚಾಲಕ ಎನ್‌.ಪಿ. ಧರ್ಮರಾಜ್‌ ತಿಳಿಸಿದರು. 

ಎ.ಕೆ. ಚಂದ್ರಪ್ಪ, ಶಂಕರ್‌ ರಾವ್‌ ಎಚ್‌.ಎಸ್‌, ಹಸನ್‌ ಅಲಿಖಾನ್‌ ಅಫ್ರೀದಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.