ADVERTISEMENT

ರಿಪ್ಪನ್‌ಪೇಟೆ: ವಿವಿಧೆಡೆ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:35 IST
Last Updated 30 ಮಾರ್ಚ್ 2023, 4:35 IST
ರಿಪ್ಪನ್‌ಪೇಟೆಯ ಶ್ರೀರಾಮ ನಗರದ ಬಡಾವಣೆಯ ಗ್ಯಾರೇಜ್‌ನಲ್ಲಿದ್ದ ಲಾರಿ ಬೆಂಕಿ ಬಿದ್ದಿರುವುದು
ರಿಪ್ಪನ್‌ಪೇಟೆಯ ಶ್ರೀರಾಮ ನಗರದ ಬಡಾವಣೆಯ ಗ್ಯಾರೇಜ್‌ನಲ್ಲಿದ್ದ ಲಾರಿ ಬೆಂಕಿ ಬಿದ್ದಿರುವುದು   

ರಿಪ್ಪನ್‌ಪೇಟೆ: ಹೋಬಳಿಯ ವಿವಿಧೆಡೆ ಮಂಗಳವಾರ ಬೆಂಕಿ ಅವಘಡ ಸಂಭವಿಸಿತು.

ಹೊಸನಗರ ರಸ್ತೆಯ ಶ್ರೀರಾಮ ನಗರದ ಬಡಾವಣೆಯಲ್ಲಿರುವ ಸುರೇಶ್ ಅವರ ಗ್ಯಾರೇಜ್‌ಗೆ ಮಂಗಳವಾರ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ರಾತ್ರಿ ಗ್ಯಾರೇಜ್ ಬಂದ್ ಮಾಡಿ ಮನೆಗೆ ತೆರಳಿದ್ದ ಮಾಲೀಕರು ಗಾಢ ನಿದ್ದೆಯಲ್ಲಿದ್ದಾಗ ಅಕಸ್ಮಿಕ ಬೆಂಕಿ ತಗುಲಿದೆ. ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಜ್ಯೋತಿ ಹಾಗೂ ಸಿಬ್ಬಂದಿ ದಟ್ಟ ಹೊಗೆ ಆವರಿಸಿದನ್ನು ಗಮನಿಸಿ, ಸ್ಥಳಕ್ಕೆ ತೆರಳಿದಾಗ ಗ್ಯಾರೇಜ್‌ನಲ್ಲಿ ಲಾರಿ ಒತ್ತಿ ಉರಿಯುತ್ತಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ADVERTISEMENT

ಗ್ಯಾರೇಜ್‌ ಪಕ್ಕದಲ್ಲಿ ಮನೆಗಳು ಇದ್ದವು. ಜ್ಯೋತಿ ಅವರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿತು.

ಅಡಿಕೆ ತೋಟಕ್ಕೆ ಬೆಂಕಿ: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ನಾಗಣ್ಣ ಗೊಂದ್ಲೆರ್ ಅವರ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ 200ಕ್ಕೂ ಅಧಿಕ ಗಿಡಗಳು ಹಾಗೂ ನೀರು ಹಾಯಿಸಲು ಅಳವಡಿಸಿದ ಪೈಪ್‌ಗಳು ನಾಶವಾಗಿವೆ.

ಇದೇ ಪಂಚಾಯಿತಿಯ ಸೂಡುರು ಗೇಟ್ ಬಳಿ ರಾಘವೇಂದ್ರ ಅವರ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ.

ಶಾಸಕ ಎಚ್. ಹಾಲಪ್ಪ ಹರತಾಳು ಅವರು ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.