ADVERTISEMENT

ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ ಇಂದು

ಸಂಘಕ್ಕೆ ಶತಮಾನೋತ್ಸವದ ಹರ್ಷ: ಗಣವೇಷಧಾರಿಗಳ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:07 IST
Last Updated 12 ಅಕ್ಟೋಬರ್ 2025, 6:07 IST
ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್‌ನ ವಿಜಯದಶಮಿ ಪಥ ಸಂಚಲನಕ್ಕೆ ಗಣವೇಷಧಾರಿಗಳ ಸಿದ್ಧತೆಯ ನೋಟ
ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್‌ನ ವಿಜಯದಶಮಿ ಪಥ ಸಂಚಲನಕ್ಕೆ ಗಣವೇಷಧಾರಿಗಳ ಸಿದ್ಧತೆಯ ನೋಟ   

ಶಿವಮೊಗ್ಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿಜಯದಶಮಿ ಪಥ ಸಂಚಲನಕ್ಕೆ ಮಲೆನಾಡಿನ ಮುಕುಟ ಶಿವಮೊಗ್ಗ ನಗರ ಸಜ್ಜಾಗಿದೆ. 2025, ಸಂಘದ ಶತಮಾನೋತ್ಸವ ವರ್ಷ. ಹೀಗಾಗಿ ಪಥ ಸಂಚಲನ ಕಾರ್ಯಕ್ಕೆ ವಿಶೇಷ ಮಹತ್ವ ಬಂದಿದೆ.

ಪಥ ಸಂಚಲನಕ್ಕೆ ಶಿವಮೊಗ್ಗ ನಗರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ ಸೇರಿದಂತೆ ಪಥ ಸಂಚಲನ ಮಾರ್ಗದಲ್ಲಿ ಆರ್‌ಎಸ್‌ಎಸ್‌ನ ಇತಿಹಾಸ ಹಾಗೂ ಹಿರಿಮೆ ಬಿಂಬಿಸುವ ಕಟೌಟ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ವಿಜಯದಶಮಿ ಪಥ ಸಂಚಲನ ಸಂಜೆ 4 ಗಂಟೆಗೆ ಎಸ್‌ಪಿಎಂ ರಸ್ತೆಯ ಕೋಟೆ ಮಾರಿಕಾಂಬಾ ದೇವಸ್ಥಾನದ ಆವರಣದಿಂದ ಆರಂಭವಾಗಲಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿ ಗುಡಿ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ಪಥ ಸಂಚಲನದಲ್ಲಿ ಸಾವಿರಾರು ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಹೆಜ್ಜೆ ಹಾಕಲಿದ್ದಾರೆ ಎಂದು ನಗರ ಸಂಘ ಚಾಲಕ ಲೋಕೇಶ್ವರ ಕಾಳೆ ತಿಳಿಸಿದ್ದಾರೆ.

ADVERTISEMENT