ಸಾಗರ: ‘ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ಪಾರ್ಲರ್ ಆರಂಭಿಸುವುದು ಪೂರಕ ಉದ್ಯಮವಾಗಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಭಾನುವಾರ ನೂತನವಾಗಿ ಆರಂಭಗೊಂಡ ನಂದಿನಿ ಪಾರ್ಲರ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರವ್ಯಾಪ್ತಿಯ ವಿವಿಧೆಡೆ ನೂತನವಾಗಿ ನಂದಿನಿ ಪಾರ್ಲರ್ ತೆರೆಯಲಾಗಿದೆ. ಆನಂದಪುರಂ, ಹೊಸನಗರ ಭಾಗಗಳಲ್ಲೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಲರ್ ತೆರೆಯಲಾಗುವುದು ಎಂದು ತಿಳಿಸಿದರು.
‘ನಂದಿನಿ ಪಾರ್ಲರ್‌ನಲ್ಲಿ ನಂದಿನಿ ಹಾಲಿನ 200ಕ್ಕೂ ಹೆಚ್ಚಿನ ಉತ್ಪನ್ನಗಳು ಲಭ್ಯವಿರುತ್ತದೆ. ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಈ ಪಾರ್ಲರ್ ತೆರೆದಿರುತ್ತದೆ’ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾಹಿತಿ ನೀಡಿದರು.
ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್, ನಗರಸಭೆ ಸದಸ್ಯರಾದ ಸೈಯದ್ ಜಾಕೀರ್, ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಪ್ರಮುಖರಾದ ಐ.ಎನ್.ಸುರೇಶ್ ಬಾಬು, ಚೇತನ್ ರಾಜ್ ಕಣ್ಣೂರು, ಜಯರಾಮ್, ಅನಿಲ್ ಕುಮಾರ್, ಬೀರೇಶ್ ಕಾಗೋಡು, ರವೀಂದ್ರ ಸಾಗರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.