ADVERTISEMENT

ಜುಲೈ 6ಕ್ಕೆ ‘ಎದೆಯ ಹಣತೆ’, ‘ಮಾಯಾಮೃಗ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:16 IST
Last Updated 3 ಜುಲೈ 2025, 15:16 IST

ಸಾಗರ: ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಹೆಗ್ಗೋಡಿನ ಸತ್ಯಶೋಧನ ರಂಗ ಸಮುದಾಯ, ಜನಮನದಾಟ ತಂಡವು ಬಾನು ಮುಷ್ತಾಕ್ ಅವರ ಕತೆ ‘ಎದೆಯ ಹಣತೆ’, ಪೂರ್ಣ ತೇಜಸ್ವಿ ಅವರ ಕತೆ ‘ಮಾಯಾಮೃಗ’ ಆಧರಿಸಿದ ನಾಟಕ ಪ್ರದರ್ಶನವನ್ನು ಜುಲೈ 6ರಂದು ಸಂಜೆ 7ಕ್ಕೆ ಆಯೋಜಿಸಿದೆ.

ಎದೆಯ ಹಣತೆ ನಾಟಕವನ್ನು ಎಂ.ಗಣೇಶ್ ಹೆಗ್ಗೋಡು ನಿರ್ದೇಶಿಸಿದ್ದು, ಸಲ್ಮಾ ದಂಡಿನ್ ಅವರ ವಿನ್ಯಾಸವಿದೆ. ಮಾಯಾಮೃಗ ನಾಟಕವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶಿಸಿದ್ದಾರೆ. ಎರಡೂ ನಾಟಕಗಳಿಗೆ ಭಾರ್ಗವ ಕೆ.ಎನ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT