ADVERTISEMENT

ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ಆರೋಪ: ಎಸ್‌ಡಿಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:27 IST
Last Updated 18 ಮೇ 2022, 4:27 IST
ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜ್ಞಾನವಾಪಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ. ಅದು ಕಾರಂಜಿ. ಮುಸ್ಲಿಮರು ಪ್ರಾರ್ಥನೆಗೂ ಮೊದಲು ಕೈಕಾಲು ತೊಳೆದು ಕೊಳ್ಳುವ ಜಾಗವಾಗಿದೆ. ಈಗ ಅದನ್ನೇ ಶಿವಲಿಂಗ ಎಂದು ಬಿಂಬಿಸಲಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

1991ರ ಭಾರತದ ಆರಾಧನಾ ಕಾಯ್ದೆ ಪ್ರಕಾರ 1942ರಿಂದ ಯಾವ ಸ್ಥಳಗಳಲ್ಲಿ ಮಸೀದಿ, ಚರ್ಚ್‌, ದೇವಾಲಯಗಳು ಇರುತ್ತವೆಯೋ ಅವುಗಳನ್ನು ಯಥಾಸ್ಥಿತಿಯಲ್ಲಿ ಬಿಡಬೇಕು. ಅವುಗಳಿಗೆ ರಕ್ಷಣೆ ನೀಡಬೇಕು ಎಂದಿದೆ. ಆದರೆ, ‌ಕಾಯ್ದೆಯನ್ನು ಮೀರಿ ಕೋಮುವಾದಿ ಶಕ್ತಿಗಳು ದೇಶದಲ್ಲಿ ವಿಷಬೀಜ ಬಿತ್ತಿ, ಕೋಮು ಸೌಹಾರ್ದತೆಯನ್ನು ಹಾಳುಗೆಡವಿ, ಮುಸ್ಲಿಮರ ಪವಿತ್ರ ಸ್ಥಳಗಳಾದ ಮಸೀದಿಗಳನ್ನು ಧ್ವಂಸ ಮಾಡುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ADVERTISEMENT

ನ್ಯಾಯಾಲಯ ಕೂಡ 1991ರ ಆರಾಧನಾ ಕಾಯ್ದೆಯನ್ನು ಪರಿಶೀಲಿಸಲಿಲ್ಲ. ಕೇವಲ 5 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆ ಜಾಗವನ್ನು ಚಿತ್ರೀಕರಣ ಮಾಡಲು ಅನುಮತಿ ನೀಡಿದೆ. ಇದು ಸರಿಯಲ್ಲ. ಬಿಜೆಪಿ ಸರ್ಕಾರ ಮುಸ್ಲಿಂ ವಿರೋಧಿಯಾಗಿದ್ದು, ಈ ದೇಶದ ಕಾನೂನನ್ನು ಗೌರವಿಸುತ್ತಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಮುಜೀಬ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.