ADVERTISEMENT

‘ಕೊರೊನಾ ಲಸಿಕೆ ಪೂರೈಕೆ: ರಾಜ್ಯಕ್ಕೆ ಎರಡನೇ ಸ್ಥಾನ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 13:25 IST
Last Updated 3 ಜನವರಿ 2022, 13:25 IST
ಹೊಳೆಹೊನ್ನೂರಿನ ಪಿಯು ಕಾಲೇಜಿನಲ್ಲಿ ಮಕ್ಕಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಗ್ರಾಮಾಂತರ ಶಾಸಕ ಅಶೋಕನಾಯ್ಕ್ ಚಾಲನೆ ನೀಡಿದರು. ಮಂಡಲ ಅಧ್ಯಕ್ಷ ಡಿ. ಮಂಜುನಾಥ್, ಟಿಎಚ್‍ಒ ಅಶೋಕ್, ಡಾ.ದೇವಾನಂದ್ ಇದ್ದಾರೆ.
ಹೊಳೆಹೊನ್ನೂರಿನ ಪಿಯು ಕಾಲೇಜಿನಲ್ಲಿ ಮಕ್ಕಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಗ್ರಾಮಾಂತರ ಶಾಸಕ ಅಶೋಕನಾಯ್ಕ್ ಚಾಲನೆ ನೀಡಿದರು. ಮಂಡಲ ಅಧ್ಯಕ್ಷ ಡಿ. ಮಂಜುನಾಥ್, ಟಿಎಚ್‍ಒ ಅಶೋಕ್, ಡಾ.ದೇವಾನಂದ್ ಇದ್ದಾರೆ.   

ಹೊಳೆಹೊನ್ನೂರು: ಕೊರೊನಾ ಲಸಿಕೆ ಪೂರೈಕೆಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಹೇಳಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ. ಅಪಪ್ರಚಾರಕ್ಕೆ ಕಿವಿಗೊಟ್ಟು ಯಾವುದೇ ಕಾರಣಕ್ಕೂ ಲಸಿಕೆ ತೆಗೆದುಕೊಳ್ಳುವುದನ್ನು ತಪ್ಪಿಸಬಾರದು. ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಪಡೆದವರೇ ಎಲ್ಲರಿಗಿಂತ ಮೊದಲು ಬಂದು ಲಸಿಕೆ ಹಾಕಿಸಿಕೊಂಡು ಜೀವ ಉಳಿಸಿಕೊಂಡರು.ವಿದೇಶಗಳಲ್ಲಿ ರೋಗ ಉಲ್ಬಣಿಸಿ ಪರಿಸ್ಥಿತಿ ಕೈ ಮೀರಿದೆ. ಭಾರತದಲ್ಲಿ ಭಯದ ವಾತಾವರಣವಿಲ್ಲ. ಅಭಿವೃದ್ಧಿಯೊಂದಿಗೆ ದೇಶವಾಸಿಗಳ ಆರೋಗ್ಯದ ಬಗ್ಗೆ ಪ್ರಧಾನಿ ಕಾಳಜಿ ವಹಿಸಿದ್ದಾರೆ ಎಂದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಅಶೋಕ್, ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟ್ಯಾನಿ ಫರ್ನಾಂಡೀಸ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಗೌಡ್ರು, ವೈದ್ಯಾಧಿಕಾರಿ ದೇವಾನಂದ್, ಪ್ರಾಚಾರ್ಯ ಜಯಂತ್, ಅಶೋಕ್‍ರಾವ್, ಮಲ್ಲೇಶ್, ರಾಮಚಂದ್ರರಾವ್ ಕದಂ, ಯು. ವೆಂಕಟೇಶ್, ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.