ADVERTISEMENT

ಶಿಕಾರಿಪುರ | ಸರಗಳವು: ಮೂವರು ಆರೋಪಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:15 IST
Last Updated 25 ಜುಲೈ 2025, 4:15 IST
ಕೋರ್ಟ್ ತೀರ್ಪು
ಕೋರ್ಟ್ ತೀರ್ಪು   

ಶಿಕಾರಿಪುರ: ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ನಡೆದಿದ್ದ ಸರಗಳವು ಪ್ರಕರಣದ ಮೂವರು ಮಹಿಳಾ ಆರೋಪಿಗಳಿಗೆ ಮಂಗಳವಾರ ಇಲ್ಲಿನ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆಂದು ಸರತಿಯಲ್ಲಿ ನಿಂತಿದ್ದ ಗುಂಡಗಟ್ಟಿ ಗ್ರಾಮದ ಈರಮ್ಮ ಅವರ ಬಂಗಾರದ ಸರವನ್ನು 2018ರ ಫೆಬ್ರುವರಿ 26ರಂದು ಆರೋಪಿಗಳು ಕಳವು ಮಾಡಿದ್ದರು. 

ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು, ಮಲ್ಲವ್ವ, ದೇವಕ್ಕ, ಯಲ್ಲವ್ವ ಎಂಬವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಪಟ್ಟಣದ 1ನೇ ಸಿಜೆ, ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಹೆಗಡೆ, ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ, ₹5,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

ಸರ್ಕಾರದ ಪರವಾಗಿ ವಕೀಲ ಜಿ.ಎಂ. ರಾಜಶೇಖರ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.