ADVERTISEMENT

ಶಿಮುಲ್‌ ಚುನಾವಣೆ; ಕಣದಲ್ಲಿ 31 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 15:41 IST
Last Updated 8 ಆಗಸ್ಟ್ 2024, 15:41 IST

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್‌) ಚುನಾವಣೆಯಲ್ಲಿ ಅಂತಿಮವಾಗಿ ಹಲವು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 

ಶಿವಮೊಗ್ಗ ವಿಭಾಗದಿಂದ ಎಸ್‌.ಕುಮಾರ, ಎಚ್‌.ಬಿ. ದಿನೇಶ್‌, ಕೆ.ಎಲ್‌.ಜಗದೀಶ್ವರ, ಆನಂದ ಡಿ, ಟಿ.ಬಿ.ಜಗದೀಶ್‌ ಕಣದಲ್ಲಿ ಇದ್ದಾರೆ. ಸಾಗರ ವಿಭಾಗದಿಂದ ಬಿ.ಡಿ.ಭೂಕಾಂತ್‌, ಗಂಗಾಧರಪ್ಪ, ಟಿ.ಶಿವಶಂಕರಪ್ಪ, ಟಿ.ಎಸ್‌.ದಯಾನಂದಗೌಡ್ರು ಉಳಿದುಕೊಂಡಿದ್ದಾರೆ. 

ದಾವಣಗೆರೆ ವಿಭಾಗದಿಂದ ಬಸವರಾಜಪ್ಪ ಬಿ.ಎಂ, ಸುರೇಶ್‌ ಕೆ.ಜಿ, ಎಚ್‌.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್‌, ಎಚ್‌.ಕೆ.ಫಾಲಾಕ್ಷಪ್ಪ, ಅನಿಲ್‌ಕುಮಾರ್‌ ವೈ.ಎಂ, ಕೆ.ನಾಗರಾಜ, ಬಿ.ಜಿ.ಬಸವರಾಜಪ್ಪ, ಚೇತನ್ ನಾಡಿಗೇರ, ಡಿ.ಸಿ.ಶಾಂತವೀರಪ್ಪ ಇದ್ದಾರೆ. 

ADVERTISEMENT

ಚಿತ್ರದುರ್ಗ ವಿಭಾಗದಿಂದ ಜಿ.ಪಿ.ಯಶವಂತರಾಜು, ರಮೇಶಪ್ಪ, ಪಿ.ತಿಪ್ಪೇಸ್ವಾಮಿ, ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎಸ್‌.ಶಂಕರಲಿಂಗಪ್ಪ, ಬಿ.ಸಿ.ಸಂಜೀವಮೂರ್ತಿ, ಸಿ.ವೀರಭದ್ರಬಾಬು, ವಿ.ಕಾಂತರಾಜ್‌, ಶಿವಣ್ಣ ಪಿ.ಎಲ್‌, ಎ.ಎಂ.ಶಿವಾನಂದ, ಬಿ.ಆರ್‌.ರವಿಕುಮಾರ್ ಇದ್ದಾರೆ.  

ಆ. 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಬಿ.ಎನ್‌.ಗಿರೀಶ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.