ADVERTISEMENT

ಜನಸಾಮಾನ್ಯರ ಬೆಂಬಲವೇ ಶಿಮುಲ್‌ಗೆ ಶ್ರೀರಕ್ಷೆ: ವಿದ್ಯಾಧರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:33 IST
Last Updated 26 ಏಪ್ರಿಲ್ 2025, 15:33 IST
ಶಿಕಾರಿಪುರದಲ್ಲಿ ಶನಿವಾರ ಶಿಮೂಲ್ ಮಾರಾಟ ಮಳಿಗೆಯನ್ನು ಅಧ್ಯಕ್ಷ ವಿದ್ಯಾಧರ ಉದ್ಘಾಟಿಸಿದರು. ಟಿ.ಶಿವಶಂಕರಪ್ಪ, ನಾಗರಾಜಗೌಡ ಇತರರಿದ್ದಾರೆ.
ಶಿಕಾರಿಪುರದಲ್ಲಿ ಶನಿವಾರ ಶಿಮೂಲ್ ಮಾರಾಟ ಮಳಿಗೆಯನ್ನು ಅಧ್ಯಕ್ಷ ವಿದ್ಯಾಧರ ಉದ್ಘಾಟಿಸಿದರು. ಟಿ.ಶಿವಶಂಕರಪ್ಪ, ನಾಗರಾಜಗೌಡ ಇತರರಿದ್ದಾರೆ.   

ಶಿಕಾರಿಪುರ: ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಜತೆಗೆ ನಾಡಿನ ಜನರಿಗೆ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನ ನೀಡುತ್ತಿರುವ ಹಿರಿಮೆ ಶಿಮುಲ್ ಹೊಂದಿದೆ. ಜನಸಾಮಾನ್ಯರ ಬೆಂಬಲವೇ ಶ್ರೀರಕ್ಷೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ವೃತ್ತದ ಬಳಿ ಆರಂಭಗೊಂಡಿರುವ ಶಿಮುಲ್‌ ಮಾರಾಟ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದ್ದರೂ ನಮ್ಮ ರಾಜ್ಯದಲ್ಲಿ ಜನಸಾಮಾನ್ಯರ ಹಿತಕ್ಕಾಗಿ ಹಾಲಿನ ದರ ಬಹಳಷ್ಟು ಏರಿಕೆ ಮಾಡಿಲ್ಲ. ರಾಜ್ಯದ ಜನರಿಗೆ ಗುಣಮಟ್ಟದ ಹಾಲು ನೀಡುತ್ತಿರುವ ರೈತರಿಗೆ ನೆರವು ನೀಡಲು ದರ ಹೆಚ್ಚಿಸಲಾಗಿದೆ ಎಂಬುದನ್ನು ಜನತೆ ಗಮನಿಸಬೇಕು. ಪಟ್ಟಣದಲ್ಲಿ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಮಾರಾಟ ಮಳಿಗೆ ನಿರ್ವಹಣೆ ಮಾಡುತ್ತಿರುವುದು ಹೊಸ ಬೆಳವಣಿಗೆ ಆಗಿದ್ದು ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಶಿಮುಲ್ ನಿರ್ದೇಶಕರಾದ ಟಿ.ಶಿವಶಂಕರಪ್ಪ, ವ್ಯವಸ್ಥಾಪಕ ಎಸ್.ಜಿ.ಶೇಖರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರವೀಂದ್ರ, ಚಂದ್ರುಗೌಡ, ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ನಿರ್ದೇಶಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.