ADVERTISEMENT

ಶಿವಮ್ಮ, ಲಕ್ಷ್ಮೀಗೆ ಚಿತ್ತಾರಗಿತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 5:28 IST
Last Updated 30 ನವೆಂಬರ್ 2022, 5:28 IST
ಶಿವಮೊಗ್ಗದಲ್ಲಿ ದೀವರ ಸಾಂಸ್ಕೃತಿಕ ವೈಭವದ ಅಂಗವಾಗಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಚಿತ್ತಾರಗಿತ್ತಿ ಸ್ಪರ್ಧೆಯಲ್ಲಿ ಬೂಮಣ್ಣಿ ಬುಟ್ಟಿ ಚಿತ್ತಾರದಲ್ಲಿ ವಿಜೇತರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಹುಮಾನ ವಿತರಿಸಿದರು
ಶಿವಮೊಗ್ಗದಲ್ಲಿ ದೀವರ ಸಾಂಸ್ಕೃತಿಕ ವೈಭವದ ಅಂಗವಾಗಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಚಿತ್ತಾರಗಿತ್ತಿ ಸ್ಪರ್ಧೆಯಲ್ಲಿ ಬೂಮಣ್ಣಿ ಬುಟ್ಟಿ ಚಿತ್ತಾರದಲ್ಲಿ ವಿಜೇತರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಹುಮಾನ ವಿತರಿಸಿದರು   

ಶಿವಮೊಗ್ಗ: ದೀವರ ಸಾಂಸ್ಕೃತಿಕ ವೈಭವದ ಅಂಗವಾಗಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಚಿತ್ತಾರಗಿತ್ತಿ ಸ್ಪರ್ಧೆಯಲ್ಲಿ ಬೂಮಣ್ಣಿ ಬುಟ್ಟಿ ಚಿತ್ತಾರದಲ್ಲಿ ಸಾಗರದ ಶಿವಮ್ಮ ಪ್ರಥಮ ಬಹುಮಾನ ಪಡೆದರು. ಸೊರಬ ತಾಲ್ಲೂಕು ಕುಪ್ಪಗಡ್ಡೆಯ ತೇಜಸ್ವಿನಿ ದ್ವಿತೀಯ ಹಾಗೂ ಸಾಗರ ತಾಲ್ಲೂಕು ಐಗಿನ ಬೈಲಿನ ಅಶ್ವಿನಿ ಎಸ್. ತೃತೀಯ ಬಹುಮಾನ ಪಡೆದಿದ್ದಾರೆ.

ಸಾಗರ ತಾಲ್ಲೂಕಿನ ಕುಗ್ವೆಯ ಲೀಲಾವತಿ ನಾಲ್ಕನೇ ಬಹುಮಾನ ಪಡೆದರೆ, ಐಗಿನಬೈಲಿನ ಶ್ರುತಿ ಎ. ಬೆಳ್ಳಿ, ಹಿರೇನಲ್ಲೂರಿನ ರೇಣುಕಾ, ಹೊಳೆಕೊಪ್ಪದ ಸ್ವಾತಿ ಎನ್, ಸೂರನಗದ್ದೆಯ ಕಾವ್ಯಶ್ರೀ, ಕೆಳದಿಯ ಕಾವ್ಯ ಹಾಗೂ ಗೌತಮಪುರದ ಸುಪ್ರಿಯಾ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಹಸೆ ಚಿತ್ತಾರ ವಿಭಾಗದಲ್ಲಿ ಹೊಸನಗರ ತಾಲ್ಲೂಕು ಹಾರೋಹಿತ್ತಲಿನ ಲಕ್ಷ್ಮೀ ಸೋಮಶೇಖರ್ ಪ್ರಥಮ, ಸಾಗರ ತಾಲ್ಲೂಕು ಐಗಿನ ಬೈಲಿನ ಅಶ್ವಿನಿ ಎಸ್. ದ್ವಿತೀಯ, ಸಾಗರ ತಾಲ್ಲೂಕು ನಾಡಕಲಸಿಯ ಶ್ರುತಿ ತೃತೀಯ, ಗೌತಮಪುರದ ರೇಖಾ ನಾಲ್ಕನೇ ಬಹುಮಾನ ಪಡೆದಿದ್ದಾರೆ.

ADVERTISEMENT

ಸಾಗರ ತಾಲ್ಲೂಕು ಬರದವಳ್ಳಿಯ ಭವಾನಿ, ಮಾಗಡಿಯ ಎಂ.ಆರ್.ಸೌಮ್ಯಾ, ಹೊಳೆಕೊಪ್ಪದ ಸ್ವಾತಿ ಎನ್., ಶಿವಮೊಗ್ಗ ತಾಲ್ಲೂಕು ಪುರದಾಳಿನ ನಂದಿತಾ ನೇರಿಗೆ, ಸಾಗರ ಬೇಸೂರಿನ ನಿಹಾರಿಕಾ, ಸಾಗರ ತಾಲ್ಲೂಕು ಮಂಡಗಳಲೆಯ ಉಷಾ ಜಿ.ಎ. ಸಮಾಧಾನಕರ ಬಹುಮಾನ
ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.