ADVERTISEMENT

ಶಿವಮೊಗ್ಗ | ಸಿಇಟಿ: 9215 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:04 IST
Last Updated 16 ಏಪ್ರಿಲ್ 2025, 16:04 IST

ಶಿವಮೊಗ್ಗ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಸುಸೂತ್ರವಾಗಿ ನಡೆಯಿತು. ಶಿವಮೊಗ್ಗ 21, ಭದ್ರಾವತಿ ಐದು ಹಾಗೂ ಸಾಗರದಲ್ಲಿ ಮೂರು ಒಳಗೊಂಡು 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಮೊದಲ ದಿನ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ನಡೆದಿದ್ದು, ಭೌತಶಾಸ್ತ್ರ ವಿಷಯಕ್ಕೆ 9511 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 9215 ಮಂದಿ ಪರೀಕ್ಷೆ ಬರೆದರು. 296 ವಿದ್ಯಾರ್ಥಿಗಳು ಗೈರಾಗಿದ್ದರು. ರಸಾಯನಶಾಸ್ತ್ರ ವಿಷಯಕ್ಕೆ ಒಟ್ಟು 9511 ಮಂದಿ ನೋಂದಣಿ ಮಾಡಿಕೊಂಡಿದ್ದು, 9214 ಮಂದಿ ಪರೀಕ್ಷೆ ಬರೆದರು. 297 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.

ಸಿಇಟಿ ಎರಡನೇ ದಿನವಾದ ಗುರುವಾರ ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.