
ಶಿವಮೊಗ್ಗ: ‘ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು. ಹೀಗಾಗಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕ’ ಎಂದು ಆಭರಣ ಜ್ಯುವೆಲ್ಲರಿ ಶಿವಮೊಗ್ಗ ಶಾಖೆ ವ್ಯವಸ್ಥಾಪಕ ಗಣಪತಿ ಶೆಣೈ ಹೇಳಿದರು.
ನಗರದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಆಯೋಜಿಸಿದ್ದ ಇನ್ನರ್ ವ್ಹೀಲ್ ಜಿಲ್ಲಾ ಸಮಾವೇಶದಲ್ಲಿ ವ್ಯಾಪಾರ ಮಳಿಗೆ ಹಾಗೂ ಪ್ರದರ್ಶನ ಮಳಿಗೆಗಳ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರು ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್, ‘ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೇ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು. ಸಂಘ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು. ಇದರಿಂದ ಪರಸ್ಪರ ಒಡನಾಟ ಹೆಚ್ಚುತ್ತದೆ. ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ’ ಎಂದು ಹೇಳಿದರು.
ಉದ್ಯಮಿ ಕಡಿದಾಳ್ ಗೋಪಾಲ್, ‘ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಸಮಾವೇಶದಲ್ಲಿ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಅನೂಪ್, ಅಂಜು ಆದಿಮೂರ್ತಿ, ಬಿಂದು ವಿಜಯ ಕುಮಾರ್, ಕಾರ್ಯದರ್ಶಿ ವೀಣಾ ಹರ್ಷ, ಆಶಾ ಶ್ರೀಕಾಂತ್, ಜಯಂತಿ ವಾಲಿ, ಮಧುರ ಮಹೇಶ್, ಲತಾ ಸೋಮಣ್ಣ, ಶ್ವೇತಾ ಅಶಿತ್, ವಾರಿಜಾ ಜಗದೀಶ್, ಭಾರತಿ ಚಂದ್ರಶೇಖರ್, ಜ್ಯೋತಿ ಸುಬ್ಬೇಗೌಡ, ಆರ್.ಮನೋಹರ್, ಕಡಿದಾಳ್ ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.