ADVERTISEMENT

ಸಾಯಬೇಡ್ರಿ ಅಂತೀನಿ, ಸಾಯೋರೆ ಎಂದರೆ ಏನು ಮಾಡೋಣ: ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 19:33 IST
Last Updated 8 ಜನವರಿ 2022, 19:33 IST
 ಈಶ್ವರಪ್ಪ
ಈಶ್ವರಪ್ಪ   

ಶಿವಮೊಗ್ಗ: ‘ಸಿದ್ದರಾಮಯ್ಯ ಈ ರಾಜ್ಯದ ಆಸ್ತಿ. ಅವರನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಕೋವಿಡ್ ಸಮಯದಲ್ಲಿ ಹಮ್ಮಿಕೊಂಡಿರುವ ನಿಮ್ಮ ಹೋರಾಟ ನಿಲ್ಲಿಸಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಹಿರಿಯರೂ ನಮ್ಮ ರಾಜ್ಯದ ಆಸ್ತಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಪ್ರಾರ್ಥನೆ ಮಾಡ್ತೀನಿ. ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೆ ಅಂತಾ ಹಠಹಿಡಿದ್ರೆ ಏನು ಮಾಡೋಣ? ನೀವೂ ಇಬ್ಬರೇ ಹೋಗ್ತೀನಿ ಅಂದ್ರೂ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಟಿಕೆಟ್‌ಗಾಗಿಯಾದರೂ ಹಿಂದೆ ಬರುವರು. ಅವರನ್ನೆಲ್ಲ ಏಕೆ ಸಾಯಿಸ್ತೀರಾ ಎಂದು ಕುಟುಕಿದರು.

ADVERTISEMENT

ಅಧಿಕಾರದಲ್ಲಿ ಇದ್ದಾಗ ಕೃಷ್ಣಾ, ಕಾವೇರಿ, ಮೇಕೆದಾಟು ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ದರೂ ಕಾಂಗ್ರೆಸ್‌ ಏನೂ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿಮಗೆ ಎಲ್ಲ ನೆನಪಾಗುತ್ತದೆ. ಈ ಹೋರಾಟ ಕೋವಿಡ್ ಮುಗಿದ ಮೇಲೆ ಮಾಡಿ, ಮೊದಲು ನೀವು ಬದುಕಿ. ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇಲ್ಲದಿದ್ದರೆ ಮುಂದಿನ ಚುನಾವನೆಯಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಆಗುತ್ತದೆ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.