ADVERTISEMENT

ಸಿದ್ದರಾಮಯ್ಯ ದಾಖಲೆ ಆಡಳಿತ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:46 IST
Last Updated 16 ಜನವರಿ 2026, 4:46 IST
ಶಿರಾಳಕೊಪ್ಪದ ಬಸ್‌ ನಿಲ್ದಾಣ ಸಮೀಪ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಈಚೆಗೆ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗೋಣಿ ಮಾಲತೇಶ್ ಮಾತನಾಡಿದರು
ಶಿರಾಳಕೊಪ್ಪದ ಬಸ್‌ ನಿಲ್ದಾಣ ಸಮೀಪ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಈಚೆಗೆ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗೋಣಿ ಮಾಲತೇಶ್ ಮಾತನಾಡಿದರು   

ಶಿರಾಳಕೊಪ್ಪ (ಶಿಕಾರಿಪುರ): ಜನಪರ ಆಡಳಿತ ನೀಡುವ ಮೂಲಕ ಇಡೀ ದೇಶದಲ್ಲೇ ಮಾದರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಷ್ಟು ವರ್ಷ ಉತ್ತಮ ಆಡಳಿತ ನೀಡುವಂತಾಲಿ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಹೇಳಿದರು.

ಸಿದ್ದರಾಮಯ್ಯ ಅವರು ದಾಖಲೆ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ ಕಾರಣಕ್ಕೆ ಪಟ್ಟಣದ ಬಸ್‌ ನಿಲ್ದಾಣ ಸಮೀಪ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಈಚೆಗೆ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ನೀಡಿರುವ ಐದು ಯೋಜನೆಗಳನ್ನು ಇಡೀ ವಿಶ್ವದ ಆರ್ಥಿಕ ತಜ್ಞರು ಕೊಂಡಾಡಿದ್ದಾರೆ. ಅಲ್ಲದೆ ಅವುಗಳು ಜನಪರ ಆಗಿರುವ ಕಾರಣಕ್ಕೆ ದೇಶದ ಎಲ್ಲ ರಾಜ್ಯದಲ್ಲೂ ಅಧಿಕಾರ ಹಿಡಿಯುವ ಸಾಧನವಾಗಿದ್ದು, ಎಲ್ಲ ಪಕ್ಷಗಳೂ ಜನಪರ ಯೋಜನೆ ನೀಡುವುದಕ್ಕೆ ಅವರು ಕಾರಣರಾಗಿದ್ದಾರೆ ಎಂದರು.

ADVERTISEMENT

ರಾಜ್ಯದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಅವರು ಜನರ ಜೀವನ ಮಟ್ಟ ಸುಧಾರಿಸುವ ಜನ ಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ. ವಿರೋಧ ಪಕ್ಷದವರು ಎಷ್ಟೇ ಮಾತನಾಡಿದರೂ ಜನರ ಬೆಂಬಲ ಮಾತ್ರ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ನಯಾಜ್ ಅಹ್ಮದ್ ಖುರೇಶಿ ಹೇಳಿದರು.

ಸಾರ್ವಜನಿಕರಿಗೆ ಸಿಹಿ ವಿತರಿಸಿ, ಸಿಎಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ, ಸರ್ಕಾರದ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಲಾಯಿತು. ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾಲತೇಶ್ ಭಂಡಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸದ್ದು ಬಳ್ಳಿಗಾವಿ, ಶಿವಾನಂದಸ್ವಾಮಿ, ರಾಘವೇಂದ್ರ ಗಂಗೊಳ್ಳಿ, ಗಣೇಶ್ ಭಂಡಾರಿ, ತೇಜಪ್ಪ, ನಿರ್ಮಲಾ, ಶಿವಯೋಗಿ, ಸಂತೋಷ್, ಚಂದ್ರಪ್ಪ, ಸಾಜೀದ್ ಅಲಿ, ವಸೀಮ್, ತಾಹ, ರವಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.