ADVERTISEMENT

ಸಿಗಂದೂರು : ಈಡಿಗ ಸಮುದಾಯಕ್ಕೆ ಧರ್ಮದರ್ಶಿ ಮೊರೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:20 IST
Last Updated 30 ಅಕ್ಟೋಬರ್ 2020, 15:20 IST

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚಿಸಿರುವ ಸಮಿತಿಯ ಮೊದಲ ಸಭೆ ಬೆನ್ನಲ್ಲೇ ಮೌನ ಮುರಿದಿರುವ ಧರ್ಮದರ್ಶಿ ರಾಮಪ್ಪ, ಸಮಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಈಡಿಗ ಸಮುದಾಯ ಪ್ರತಿಭಟಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದ ಈಡಿಗ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸಿಗಂದೂರು ದೇವಸ್ಥಾನದಲ್ಲಿ ಯಾವುದೇ ಭ್ರಷ್ಟಚಾರ ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ ರಚನೆ ಮಾಡುವ ಮೂಲಕ ಏನೋ ಕಂಟಕ ತರಲು ಸರ್ಕಾರ ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ರಚಿಸಿರುವ ಸಮಿತಿಯನ್ನು ಹಿಂಪಡೆಯಬೇಕು ಎಂದು ಸರ್ಕಾರ, ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ ಅವರು, ಆರ್ಯ ಈಡಿಗ ಮಠದ ರೇಣುಕಾನಂದ ಶ್ರೀಗಳು, ಸಮುದಾಯ ಸಂಚಿನ ವಿರುದ್ಧ ಹೋರಾಟ ನಡೆಸಬೇಕು. ಅದಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.