ADVERTISEMENT

ಸಿಗಂದೂರು ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 12:51 IST
Last Updated 9 ಜನವರಿ 2019, 12:51 IST
ಸಿಗಂದೂರು ಶ್ರೀ ಚೌಡೇಶ್ವರಿ ದೇವಿ
ಸಿಗಂದೂರು ಶ್ರೀ ಚೌಡೇಶ್ವರಿ ದೇವಿ   

ಶಿವಮೊಗ್ಗ: ಶ್ರೀಕ್ಷೇತ್ರ ಸಿಗಂದೂರು ಚೌಡಮ್ಮ ದೇವಿಯ ಜಾತ್ರಾ ಮಹೋತ್ಸವ ಜ.14 ಮತ್ತು 15 ರಂದು ನಡೆಯಲಿದೆ.

ಜ.14 ರಂದು ಮುಂಜಾನೆ 3ಕ್ಕೆ ಪಂಚಾಮೃತ ಅಭಿಷೇಕ, ಮಹಾ ಅಭಿಷೇಕ, ವಿಶೇಷ ಹೂವಿನ ಹಾಗೂ ಆಭರಣ ಅಲಂಕಾರ, ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಸಂಕ್ರಾಂತಿಯ ಮೊದಲ ಪೂಜೆ ನಡೆಯಲಿದೆ. ಬೆಳಿಗ್ಗೆ 7ಕ್ಕೆ ದೇವಿಯ ಮೂಲ ಸ್ಥಾನವಾದ ಸೀಗೇಕಣಿವೆಯಲ್ಲಿ ದೇವಿಗೆ ಪೂಜೆ ನಡೆಯಲಿದೆ. ಪೂಜೆಯ ನಂತರ ಇದೀಗ ದೇವಿ ನೆಲೆಯಾಗಿರುವ ಸಿಗಂದೂರಿಗೆ ಜ್ಯೋತಿ ರೂಪದಲ್ಲಿ ಆಗಮನ ಅದ್ಧೂರಿ ಮೆರವಣಿಗೆಯೊಂದಿಗೆ ನಡೆಯಲಿದೆ.

ಜ.15 ರಂದು ಮುಂಜಾನೆ 3ಕ್ಕೆ ಪಂಚಾಮೃತ ಅಭಿಷೇಕ ಪೂಜೆ, ಮಹಾಭಿಷೇಕ, ವಿಶೇಷ ಹೂವಿನ ಹಾಗಗೂ ಆಭರಣ ಅಲಂಕಾರ ಪೂಜೆ, ಚಂಡಿಕಾಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7.30ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ, ರಾತ್ರಿ 10.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿವೆ ಎಂದು ಸಿಗಂದೂರು ಶ್ರೀಕ್ಷೇತ್ರ ಧರ್ಮದರ್ಶಿ ಡಾ.ಎಸ್. ರಾಮಪ್ಪ ಹಾಗೂ ರವಿಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.