
ಶಿಕಾರಿಪುರ: ವಿದ್ಯಾರ್ಥಿ ಸಾಧನೆಗೆ ಸಾಮಾಜಿಕ ಜಾಲತಾಣ ವೇದಿಕೆ ಆಗುವ ಬದಲು ಅಡ್ಡಿಯಾಗುತ್ತಿರುವುದು ಕಳವಳಕಾರಿ ಎಂದು ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯ ಮಾರುತಿ ಹೇಳಿದರು.
ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಜೀವನ ಶೈಲಿಗೆ ಯುವಜನ ಮಾರುಹೋಗಿರುವುದು ಕಳಕಳಕಾರಿ. ಕಷ್ಟವಿಲ್ಲದೆ ಎಲ್ಲ ಯಶಸ್ಸು ನನ್ನದಾಗಬೇಕು, ನಾನೊಬ್ಬ ಬಾಸ್, ಮಾಸ್ ಎನ್ನುವ ಸಿನಿಮೀಯ ಶೈಲಿಯ ಕಲ್ಪನೆಗೆ ಸಾಮಾಜಿಕ ಜಾಲತಾಣದ ರೀಲ್ಸ್, ಪೋಸ್ಟ್ ಕಾರಣವಾಗುತ್ತಿವೆ. ಯಶಸ್ಸು ಸೋಮರಿ ಸೊತ್ತಲ್ಲ ಎನ್ನುವ ಅರಿವು ಮೂಡಬೇಕು ಆಗ ನಿಜವಾದ ಸಾಧನೆ ಆರಂಭವಾಗುತ್ತದೆ. ಪೋಷಕರ ಕಷ್ಟ, ಸಾಧನೆ ಯುವಜನತೆಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಶಿಸ್ತು, ಸಮಯ ಪಾಲನೆ, ಮೌಲ್ಯಗಳು ವಿದ್ಯಾರ್ಥಿ ಸಾಧನೆ ಹಾದಿಗೆ ಮೆಟ್ಟಿಲುಗಳು ಎಂದು ಬಾಪೂಜಿ ರತ್ನ ಪ್ರಶಸ್ತಿ ಸ್ವೀಕರಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಮ್ಜದ್ ಹುಸೇನ್ ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕಲಾವಿದೆ ಪಂಕಜ ಮನರಂಜನೆ ಕಾರ್ಯಕ್ರಮ ನಡೆಸಿದರು. ಸಂಸ್ಥೆ ಅಧ್ಯಕ್ಷ ಬಿ.ಪಾಪಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್, ಪತ್ರಕರ್ತ ರಮೇಶ್ ಹಿರೇಜಂಬೂರು, ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಹೆಬ್ಬಾರ್, ಬಾಪೂಜಿ ಸಂಸ್ಥೆ ಕಾರ್ಯದರ್ಶಿ ಪವಿತ್ರ, ಮುಖ್ಯಶಿಕ್ಷಕ ರಾಘವೇಂದ್ರ, ಪ್ರಾಂಶುಪಾಲ ಮುಸ್ತಫ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಸಭೆ ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.