ADVERTISEMENT

ಸೊರಬ ತಾಲ್ಲೂಕು: 7 ಗ್ರಾ.ಪಂ.ಗಳಿಗಿಲ್ಲ ಪಿಡಿಒ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎರಡೆರಡು ಕಚೇರಿಗಳ ಕಾರ್ಯಭಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:45 IST
Last Updated 1 ನವೆಂಬರ್ 2025, 5:45 IST
ಸೊರಬ ತಾಲ್ಲೂಕಿನ ಕಾತವಳ್ಳಿ ಗ್ರಾ.ಪಂ. ಕಚೇರಿ
ಸೊರಬ ತಾಲ್ಲೂಕಿನ ಕಾತವಳ್ಳಿ ಗ್ರಾ.ಪಂ. ಕಚೇರಿ   

ಸೊರಬ: ‘ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ’ ಎಂಬ ಮಾತಿದೆ. ಆದರೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ತಾಲ್ಲೂಕಿ‌ನ 35 ಗ್ರಾ.ಪಂ.ಗಳ ಪೈಕಿ 7 ಪಂಚಾಯಿತಿಗಲ್ಲಿ ಪಿಡಿಒ ಇಲ್ಲ. ಹೊಸಬಾಳೆ, ಕಾತುವಳ್ಳಿ, ಇಂಡುವಳ್ಳಿ, ನ್ಯಾರ್ಸಿ, ಹರೀಶಿ, ಅಗಸನಹಳ್ಳಿ ಹಾಗೂ ಎಣ್ಣೆಕೊಪ್ಪ ಗ್ರಾಮಗಳಲ್ಲಿ ಪಿಡಿಒ ಇಲ್ಲದ ಕಾರಣ ಬೇರೆ ಪಿಡಿಒಗಳನ್ನು ಈ ಪಂಚಾಯಿತಿಗಳಿಗೆ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಒಬ್ಬ ಅಧಿಕಾರಿ ಎರಡೆರಡು ಪಂಚಾಯಿತಿ ನಿರ್ವಹಿಸಬೇಕಿರುವ ಕಾರಣ, ಆಡಳಿತ ಯಂತ್ರದ ವೇಗ ಕುಂಠಿತವಾಗಿದೆ. 

ಕಾಯಂ ಅಧಿಕಾರಿ ನೇಮಕವಾದರೆ, ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿ, ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಜನಸಾಮಾನ್ಯರ ಕೆಲಸ– ಕಾರ್ಯಗಳು ಸಕಾಲಕ್ಕೆ ನಡೆಯುತ್ತದೆ. ಆದರೆ, ತಾಲ್ಲೂಕಿನ ಏಳು ಪ್ರಮುಖ ಪಂಚಾಯಿತಿಗಳಿಗೆ ಪೂರ್ಣಾವಧಿ ಅಧಿಕಾರಿ ಇಲ್ಲ. ಏಳು ಜನ ಪಿಡಿಒಗಳು ಈ ಗ್ರಾಮಗಳೂ ಒಳಗೊಂಡಂತೆ 14 ಗ್ರಾ.ಪಂ.ಗಳ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಎಂದು ಸಾರ್ವಜನಿಕರು ಆರೋಪಿಸಿದರು.

ADVERTISEMENT

‘ತಾಲ್ಲೂಕು ಕೇಂದ್ರದಿಂದ ಕೆಲವು ಗ್ರಾ.ಪಂ.ಗಳು 35 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿವೆ. ಪಿಡಿಒಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದರಿಂದ  ಎರಡು ಕಡೆ ಓಡಾಡಬೇಕಿದ್ದು, ಪೂರ್ಣ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನಿಯೋಜಿತ ಪಿಡಿಒಗಳು ಕೆಲಸದ ಒತ್ತಡದ ನಡುವೆ ಎರಡೂ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯ ನಿರ್ವಹಿಸಬೇಕಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.