ADVERTISEMENT

ಸೊರಬ ಪಟ್ಟಣದಲ್ಲಿ ಹರ್ ಘರ್ ತಿರಂಗ ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:48 IST
Last Updated 13 ಆಗಸ್ಟ್ 2025, 4:48 IST
ಸೊರಬ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ತಿರಂಗ ಯಾತ್ರೆ‌ ನಡೆಸಲಾಯಿತು
ಸೊರಬ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ತಿರಂಗ ಯಾತ್ರೆ‌ ನಡೆಸಲಾಯಿತು   

ಸೊರಬ: ದೇಶ ಭಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸಮಸ್ತ ಭಾರತೀಯರೂ ಮನೆಗಳ ಮೇಲೆ ತಿರಂಗ ಧ್ವಜ ಹಾರಿಸಬೇಕಿದೆ ಎಂದು ಬಿಜೆಪಿ‌ ಮುಖಂಡ ರಾಜು ಎಂ. ತಲ್ಲೂರು ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾಂಗಳವಾರ ಆಯೋಜಿಸಿದ್ದ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ ಯಶಸ್ಸಿಗಾಗಿ ವೀರಯೋಧರಿಗೆ ನಮನ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗ ಯಾತ್ರೆಯಲ್ಲಿ ಅವರು‌ ಮಾತನಾಡಿದರು.

‘ದೇಶ ಭಕ್ತಿಯ ಮುಖೇನ ಸ್ವಾತಂತ್ರ್ಯ ಕಾಪಾಡುವುದು ಮೊದಲ ಆಶಯವಾಗಿದೆ. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ಸಿಗೆ ಕಾರಣರಾದ ದೇಶದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಆ. 13ರಿಂದ 15ರವರೆಗೆ ದೇಶದ ಎಲ್ಲಡೆ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಸ್ತುತ ದೇಶವು ಹಿಂದೆಂದಿಗಿಂತಲೂ ಸದೃಢವಾಗಿದೆ. ಬಿಜೆಪಿ ಸ್ನೇಹಕ್ಕೆ ಮತ್ತು ಪ್ರೀತಿಗೆ ಮುಂದಾಳತ್ವ ವಹಿಸುವ ಪಕ್ಷವಾಗಿದೆ’ ಎಂದು ಬಿಜೆಪಿ ಮುಖಂಡ ಎಚ್.ಇ.ಜ್ಞಾನೇಶ್ ತಿಳಿಸಿದರು.

ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ನಾಯ್ಕ ಮಾವಿನಬಳ್ಳಿಕೊಪ್ಪ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಮುಖರಾದ ಪಾಣಿ ರಾಜಪ್ಪ, ಶಿವಕುಮಾರ ಕಡಸೂರು, ಜಾನಕಪ್ಪ ಒಡೆಯರ್, ವಿಜಯೇಂದ್ರ ಗೌಡ, ಆಶಿಕ್ ನಾಗಪ್ಪ, ಬೆನಕಪ್ಪ, ಸುರೇಶ್ ಉದ್ರಿ, ಸಂದೀಪ ಯಲವಳ್ಳಿ, ನಂದೀಶ ಗೌಡ, ವೀರೇಂದ್ರ ಕುಮಾರ್ ಡಿ, ಸಂದೇಶ್ ಟಿ, ಸುಮಂತ ಟಿ.ಆರ್, ನೂತನ್ ವೈ.ಸಿ, ಸುಮಂತ್ ಗೌಡ, ಸಂದೀಪ್ ಗೌಡ, ಕುಮಾರ್ ಆಚಾರ್, ಚಂದ್ರಪ್ಪ ಮಾಸ್ತರ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.