ಸೊರಬ: ‘ಆಧುನಿಕ ಪರಿಕರಗಳನ್ನು ಬಳಸದೆ ಸಾಂಪ್ರದಾಯಿಕ, ಗ್ರಾಮೀಣ ಕಲಾ ವಸ್ತುಗಳನ್ನೇ ಬಳಸಿ ನಾಟಕ ಪ್ರದರ್ಶನ ಮಾಡುತ್ತಾ ಬರುತ್ತಿರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಉಳಿಸುವ ಯತ್ನವಾಗಿದೆ’ ಎಂದು ದಂತವೈದ್ಯ ಜ್ಞಾನೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕಡೇ ಜೋಳದಗುಡ್ಡೆ ಗ್ರಾಮದಲ್ಲಿ 7ನೇ ವರ್ಷದ ನಾಗ ಚೌಡೇಶ್ವರಿ ದೇವಿಯ ಸಮಾರಾಧನೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಸಂಸ್ಕೃತಿಯ ಪ್ರಭಾವದ ನಡುವೆ ನಾಟಕ, ಯಕ್ಷಗಾನ, ಬಯಲಾಟದಂತಹ ಗ್ರಾಮೀಣ ಕಲೆಗಳು ನಶಿಸುವ ಹಂತದಲ್ಲಿವೆ. ಆದರೂ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗುತ್ತಿದೆ ಎಂದು ಶ್ಲಾಘಿಸಿದರು.
ಚಂದ್ರಗುತ್ತಿ ಗ್ರಾ.ಪಂ ಉಪಾಧ್ಯಕ್ಷ ರೇಣುಕಾ ಪ್ರಸಾದ್, ಸದಸ್ಯ ರತ್ನಾಕರ ಎಂ.ಪಿ, ಪರಶುರಾಮ್, ಗ್ರಾ.ಪಂ. ಮಾಜಿ ಸದಸ್ಯ ನಾರಾಯಣಪ್ಪ, ಸಂತೋಷ್, ಚಂದ್ರಪ್ಪ, ಮಂಜಪ್ಪ, ರಾಮಚಂದ್ರಪ್ಪ, ಹುಲಿಯಣ್ಣ, ತಿಮ್ಮಪ್ಪ, ಕಲ್ಲಪ್ಪ, ಪುಟ್ಟಪ್ಪ, ಲೋಕೇಶ್, ಈಶ್ವರ್, ದಬ್ಬಣ್ಣ, ನಂದಪ್ಪ ಇತರರು ಇದ್ದರು. ಲಕ್ಷ್ಮಣ ನಿರೂಪಿಸಿದರು, ಪ್ರಶಾಂತ್ ಸ್ವಾಗತಿಸಿದರು, ಗಣೇಶ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.