ADVERTISEMENT

ನಿರ್ದಿಷ್ಟ ಔಷಧ ಕೊಡಲಿ: ಬೆಳೆಗಾರರ ಆಗ್ರಹ

ಹಣ್ಣು,ತರಕಾರಿಗೆ ಹೊಡೆಯುವ ಔಷಧಿ ಶಿಫಾರಸು: ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 5:30 IST
Last Updated 28 ನವೆಂಬರ್ 2022, 5:30 IST

ಶಿವಮೊಗ್ಗ: ಕಲ್ಲಂಗಡಿ ಹಣ್ಣು ಹಾಗೂ ತರಕಾರಿ ಬೆಳೆಗೆ ಹೊಡೆಯುವ ಸಾಫ್ (saaf) ಔಷಧವನ್ನು ಎಲೆಚುಕ್ಕಿ ರೋಗಕ್ಕೆ ಹೊಡೆಯಲು ತೋಟಗಾರಿಕೆ ಇಲಾಖೆಯವರು ಶಿಫಾರಸು ಮಾಡಿದ್ದಾರೆ. ಇದರಿಂದ ಯಾವುದೇ ಪ್ರಯೋಜನ
ವಾಗಿಲ್ಲ ಎಂದು ತೀರ್ಥಹಳ್ಳಿ ತಾಲ್ಲೂಕಿನ ಉಂಟೂರು ಗ್ರಾಮದ ಅಡಿಕೆ ಬೆಳೆಗಾರರು ಅಳಲು ತೋಡಿಕೊಂಡರು.

ಭಾನುವಾರ ಮುಖ್ಯಮಂತ್ರಿ ಭೇಟಿ ಕಾರಣ ಬಂದಿದ್ದಅಧಿಕಾರಿಗಳ ಎದುರು ರೈತರು ಸಮಸ್ಯೆ ಹೇಳಿಕೊಂಡರು.

‘ನಮಗೆ ಔಷಧ ಮಾತ್ರ ಬೇಕಿದೆ. ಪರಿಹಾರ ಬೇಕಿಲ್ಲ. ಅದರಲ್ಲೂ ಎಲೆಚುಕ್ಕಿ ರೋಗಕ್ಕೆ ನಿರ್ದಿಷ್ಟ ಔಷಧ ಕೊಡಲಿ.ಎಲೆಚುಕ್ಕಿ ರೋಗಕ್ಕೆ ಔಷಧ ಹೊಡೆಯಲು ಪ್ರತಿ ಎಕರೆಗೆ ಒಮ್ಮೆಗೆ ₹ 25,000 ಖರ್ಚು ಬರುತ್ತಿದೆ. ಔಷಧ ಹೊಡೆಯುವವರಿಗೆ ಪ್ರತಿ ಡ್ರಮ್‌ಗೆ ₹ 1,200 ಕೊಡಬೇಕಿದೆ. ನಾಲ್ಕು ಬಾರಿ ಔಷಧ ಹೊಡೆಯಲು ಹೇಳಿದ್ದಾರೆ. ನಿರ್ದಿಷ್ಟ ಔಷಧಿ ಶಿಫಾರಸು ಮಾಡಿದಲ್ಲಿ ನಮಗೆ ಖರ್ಚು ಕಡಿಮೆ ಆಗಲಿದೆ’ ಎಂದು ಬೆಳೆಗಾರ ರಕ್ಷಿತ್ ಮೇಗರವಳ್ಳಿ ಆಗ್ರಹಿಸಿದರು.

ADVERTISEMENT

‘ನೀವು ಶಿಫಾರಸು ಮಾಡಿರುವ ಎಲ್ಲ ಔಷಧಗಳನ್ನು ಪ್ರಯೋಗಿಸಿದ್ದೇವೆ. ಯಾವುದೇ ಉಪಯೋಗ ಆಗಿಲ್ಲ’ ಎಂದು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಅವರನ್ನು ಬೆಳೆಗಾರರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.