ADVERTISEMENT

26ಕ್ಕೆ ‘ಶ್ರೀ ಲಲಿತಾದೇವಿ ವಿಜಯ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 5:03 IST
Last Updated 21 ಅಕ್ಟೋಬರ್ 2025, 5:03 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಸಾಗರ: ಇಲ್ಲಿನ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ಯಕ್ಷಮೇಳವು ಅ. 26ರಂದು ಸಂಜೆ 4.25 ಕ್ಕೆ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ಶ್ರೀಲಲಿತಾದೇವಿ ವಿಜಯ’ ಯಕ್ಷ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.

ಸಂಜನಾ ಆರ್. ಹೆಗಡೆ ಮತ್ತು ಚಂದನಾ ಗುಂಡೂಮನೆ ಕೃತಿ ಬಿಡುಗಡೆ ಮಾಡಲಿದ್ದು, ಯಕ್ಷಗಾನ ವಿದ್ವಾಂಸ ಶಂಕರಶಾಸ್ತ್ರಿ, ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ, ಬರಹಗಾರ ಸೃಜನ್ ಗಣೇಶ್ ಹೆಗಡೆ ಕೃತಿ ಕುರಿತು ಮಾತನಾಡಲಿದ್ದಾರೆ.

ADVERTISEMENT

ನಂತರ ನಡೆಯುವ ಯಕ್ಷಗಾನ ತಾಳಮದ್ದಲೆ ಪ್ರಸ್ತುತಿಯಲ್ಲಿ ಸೂರ್ಯನಾರಾಯಣ ಹೆಗಡೆ, ಸೃಜನ್ ಗಣೇಶ್ ಹೆಗಡೆ, ಶ್ರೀವತ್ಸ, ಅರುಣ ಬೆಂಕಟವಳ್ಳಿ, ರವಿಶಂಕರ್ ಭಟ್, ಅಶೋಕ್ ಕುಮಾರ್ ಪಾಲ್ಗೊಳ್ಳಲಿದ್ದು ಆರ್.ಶ್ರೀನಿವಾಸ್, ರತ್ನಾಕರ ಹೊನಗೋಡು, ಕೆ.ಆರ್.ಗಣೇಶ್ ಪ್ರಸಾದ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.