ADVERTISEMENT

ರಾಮಕೃಷ್ಣ ವಿದ್ಯಾನಿಕೇತ | 600ಕ್ಕೂ ಹೆಚ್ಚು ಅಂಕ ಪಡೆದ 22 ಮಕ್ಕಳು

​ಪ್ರಜಾವಾಣಿ ವಾರ್ತೆ
Published 9 ಮೇ 2023, 16:29 IST
Last Updated 9 ಮೇ 2023, 16:29 IST
ಪೂರ್ವಿರಾಜ್
ಪೂರ್ವಿರಾಜ್   

ಶಿವಮೊಗ್ಗ: ಇಲ್ಲಿನ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆಯ ಮಕ್ಕಳು ಈ ವರ್ಷವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಶೇ 70ರಷ್ಟು ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಕುಳಿತಿದ್ದ 160 ಮಕ್ಕಳು ಉತ್ತೀರ್ಣರಾಗಿದ್ದು, ಶೇ.100 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ವಿಶೇಷವೆಂದರೆ ಪರೀಕ್ಷೆಯಲ್ಲಿ 23 ಮಕ್ಕಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದು, ವಿಷಯವಾರು ಈ ಮಕ್ಕಳು ಶೇ 100ರ ಫಲಿತಾಂಶ ಪಡೆದಿದ್ದಾರೆ.

ದಿಶಾ ಶೆಣೈ ಹಾಗೂ ಬಿ.ರೋಹಿಣಿ 620 ಅಂಕ ಪಡೆದಿದ್ದು, ಪೂರ್ವಿ ಎಲ್.ರಾಜ್ 619, ಹರ್ಷಿತಾ ಟಿ.ಎಂ 618, ನಿಧಿ ಹೊಸ್ಮನೆ 616, ದೀಪ್ತಿ ವಿ ಹಾಗೂ ವೆಂಕಟೇಶ್ ಎನ್ ಅವರು 615 ಅಂಕಗಳಿಸಿದ್ದಾರೆ. ಅಂತೆಯೇ ಅಮೃತ ಡಿ, ತನ್ಮಯಿ ಆರ್, 614, ಸನಿಕಾ ಎ.613, ಕೃತಾತ್, ಸುಗೋಶ್ ಎನ್. 611, ಸೈಯದ್ ಮಹಮ್ಮದ್ ಖಲಂದರ್, ಧನ್ಯ ಕೆ.ಎನ್, ಎ.ಯು. ಗೌತಮಿ 610, ಸಿಂಚಿತಾ ವೈ.ಟಿ. ಸಮರ್ಥ್ ಡಿ.ವಿ, 608, ದಿಶಾಂತ್ ಆರ್ ಸಬ್ರತ್ 605, ತೇಜಸ್ ವಿ 603, ಐಶ್ವರ್ಯ ಪಿ ಶಿಂಧೆ, ಪ್ರೇಮ್ ಎಚ್.ಪಿ ಗೌಡ 602, ಚೇತನ್ ಕುಮಾರ್ ಕೆ.ವಿ. 601, ಮೈತ್ರಿ ಆರ್ 600 ಅಂಕ ಗಳಿಸಿದ್ದಾರೆ.

ADVERTISEMENT

ಪರೀಕ್ಷೆಯಲ್ಲಿ ಪಾಲ್ಗೊಂಡ 95 ಮಕ್ಕಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ. 48 ಅತ್ಯುತ್ತಮ, 22 ಉತ್ತಮ, ಉಳಿದ ಐವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕ ವೃಂದಕ್ಕೆ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.

ದಿಶಾ ಶೆಣೈ
ಟಿ.ಎಂ.ಹರ್ಷಿತ್
ನಿಧಿ ಹೊಸ್ಮನೆ
ಬಿ.ರೋಹಿಣಿ
ವಿ.ದೀಪ್ತಿ
ಎನ್.ವೆಂಕಟೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.