ADVERTISEMENT

ಅಗಮುಡಿ ಸಮಾಜದ ಬಲವರ್ಧನೆಗೆ ಶ್ರಮಿಸಿ

ಅಗಮುಡಿ ಸಮಾಜದ 33ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಅರುಣಾಚಲಂ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 14:17 IST
Last Updated 16 ಜೂನ್ 2019, 14:17 IST
ಶಿವಮೊಗ್ಗ ಅಗಮುಡಿ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಭಾರತ ತುಳುವ ವೆಲ್ಲಾಳ (ಮೊದಲಿಯಾರ್) ಸಂಘದ 33ನೇ ರಾಷ್ಟ್ರೀಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಡಾ. ಅರುಣಾಚಲಂ ಬಿಡುಗಡೆಗೊಳಿಸಿದರು
ಶಿವಮೊಗ್ಗ ಅಗಮುಡಿ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಭಾರತ ತುಳುವ ವೆಲ್ಲಾಳ (ಮೊದಲಿಯಾರ್) ಸಂಘದ 33ನೇ ರಾಷ್ಟ್ರೀಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಡಾ. ಅರುಣಾಚಲಂ ಬಿಡುಗಡೆಗೊಳಿಸಿದರು   

ಶಿವಮೊಗ್ಗ: ಅಗಮುಡಿ ಮೊದಲಿಯಾರ್ ಸಮಾಜದ ಪೋಷಕರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಐಎಂಪಿಎ ಸಂಸ್ಥಾಪಕ ಅಧ್ಯಕ್ಷ ಡಾ.ಆರ್. ಅರುಣಾಚಲಂ ಸಲಹೆ ನೀಡಿದರು.

ನಗರದ ಆಲ್ಕೋಳ ಸಮೀಪದ ಅಗಮುಡಿ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಅಗಮುಡಿ ಸಮಾಜ ಸೇವಾ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಅಖಿಲ ಭಾರತ ತುಳುವ ವೆಲ್ಲಾಳ (ಮೊದಲಿಯಾರ್) ಸಂಘದ 33ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಅಗಮುಡಿ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಗೊಳ್ಳಬೇಕು. ಸಮಾಜದ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸದೇ ಉತ್ತಮ ಶಿಕ್ಷಣ ಪಡೆದು ಐಎಎಸ್, ಐಪಿಎಸ್ ಸೇರಿ ಉನ್ನತ ಮಟ್ಟದ ಅಧಿಕಾರಿಗಳಾಗಿ ರೂಪುಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿಯೇ ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು.ಇಂದಿನ ಸ್ಪರ್ಧಾತ್ಮಕ ಯುಗವನ್ನು ಸಮರ್ಥವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು. ಅಶಕ್ತರಿಗೆ ನೆರವಿನ ಹಸ್ತ ಚಾಚಬೇಕು. ತಮ್ಮಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ಬದಿಗೊತ್ತಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.ಸಂಘಟನೆ ಸದಾ ಕ್ರಿಯಾಶೀಲವಾಗಿರಬೇಕು. ಸಂಘದ ಪ್ರತಿಯೊಬ್ಬರೂ ಅತ್ಯಂತ ನಿಷ್ಠೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರವೇ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಐಎಟಿವಿಎಸ್‌ನ ಅಧ್ಯಕ್ಷ ಆರಂಗ ಎಲ್ಲಾಂಗೋವನ್, ‘ಸಮಾಜದಲ್ಲಿ ಐಕ್ಯತೆ ಇದ್ದಾಗ ಮಾತ್ರವೇ ಎಲ್ಲಾ ವಿಷಯಗಳಲ್ಲೂ ಜಯಶೀಲರಾಗಲು ಸಾಧ್ಯ. ಹಾಗಾಗಿ ಸಮಾಜದ ಪ್ರತಿಯೊಬ್ಬರಲ್ಲೂ ಮೇಲು ಕೀಳು ಎಂಬ ಭಾವನೆ ದೂರವಾಗಿ ನಾವೆಲ್ಲರೂ ಒಂದು ಎಂಬ ಮನೋಭಾವ ಮೊಳೆಯಬೇಕು. ಇರುವ ಸಣ್ಣಪುಟ್ಟ ಗೊಂದಲಗಳನ್ನು ಮರೆತು ಸಮಾಜ ಮತ್ತು ದೇಶದ ಪ್ರಗತಿಗಾಗಿ ತಮ್ಮದೇ ಆದ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಅಗಮುಡಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್. ಮಂಜುನಾಥ್, ‘ವಿನೋದಿನಿ ಮೊದಲಿಯಾರ್ ಸಮಾಜದ ಇತಿಹಾಸದ ಬಗ್ಗೆ ತಿಳಿಸಿಕೊಟ್ಟರು. ಸಂಘದ ಉಪಾಧ್ಯಕ್ಷ ಆರ್.ಸೂರ್ಯನಾರಾಯಣ ಸಂಘ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ದಾನಿಗಳು ಹಾಗೂ ಅಗಮುಡಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನೀಲಮೇಘಂ ಅವರನ್ನು ಗೌರವಿಸಲಾಯಿತು. ಅಲ್ಲದೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ಹಿರಿಯರಾದ ಕೃಷ್ಣಪ್ಪ ಮೊದಲಿಯಾರ್, ಅಣ್ಣಾಮಲೈ ಮೊದಲಿಯರ್, ಮಾಣಿಕ್ಯ ಮೊದಲಿಯಾರ್, ಷಣ್ಮುಗಂ ಮೊದಲಿಯಾರ್, ರಾಮಚಂದ್ರ ಮೊದಲಿಯಾರ್, ಕಣ್ಣಪ್ಪ ಮೊದಲಿಯಾರ್, ನಟೇಶ್ ಮೊದಲಿಯಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಎಂ. ರಾಜು, ಎಂ. ಭೂಪಾಲ್, ವಿ. ಸುಂದರಂ, ಎನ್. ವೆಂಕಟೇಶ್, ಜಿ. ಮನೋಹರ್, ಎನ್. ಷಣ್ಮುಗಂ, ಸಂಘದ ನಿರ್ದೇಶಕರಾದ ಆರ್. ನಿತಿನ್, ಎಸ್. ದೊರೈ, ಜಿ. ದೊರೈಸ್ವಾಮಿ, ಜಿ. ರಾಜ, ಜಿ. ಅಶೋಕ್, ಜಿ. ಜಗದೀಶ್, ಎ. ರತ್ನವೇಲು, ಎನ್. ಕುಮಾರ್, ಎಸ್. ರವಿಶಂಕರ್, ಟಿ.ಎಸ್. ರಮೇಶ್, ಕೆ. ಮಂಜುನಾಥ್, ಡಿ. ಮಂಜುನಾಥ್, ಎ. ಮೂರ್ತಿ, ಡಿ. ಎಕಂಬರಂ ಇದ್ದರು. ಸಮ್ಮೇಳನದಲ್ಲಿ ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಕೆಜಿಎಫ್, ನೈವೇಲಿ, ಸೇಲಂ, ವೇಲೂರು ಸೇರಿ ದೇಶದ ವಿವಿಧ ಭಾಗಗಳ ಸಮಾಜದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.