
ಶಿಕಾರಿಪುರ: ಪಟ್ಟಣದ ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ವೈ.ಆರ್.ಸುನಿತಾ, ಉಪಾಧ್ಯಕ್ಷರಾಗಿ ಸುರೇಶ್ ನಿಂಬೆಗೊAದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವರಿಬ್ಬರೆ ನಾಮಪತ್ರ ಸಲ್ಲಿಸಿದ ಕಾರಣಕ್ಕೆ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ನೂತನ ಅಧ್ಯಕ್ಷೆ ವೈ.ಆರ್.ಸುನಿತಾ ಮಾತನಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸುವ ಭರವಸೆಯೊಂದಿಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಎಲ್ಲ 13ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಸದಸ್ಯರ ಹಿತಕ್ಕಾಗಿ ಕೆಲಸ ಮಾಡುವ ಭರವಸೆ ನೀಡಿದರು.
ಕಳೆದ 40ವರ್ಷಗಳಿಂದ ಬಿಜೆಪಿ ಹಿಡಿತದಲ್ಲೆ ಸಂಘ ಇರುವುದು ಹೆಮ್ಮೆಯ ಸಂಗತಿ. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉತ್ತಮ ಅನುದಾನ ನೀಡಿದ ಪರಿಣಾಮ ಸಂಘ ಸಾಲದ ಕೂಪದಿಂದ ಹೊರಕ್ಕೆ ಬರಲು ಸಾಧ್ಯವಾಗಿದೆ. ಸಂಘದ ಆವರಣದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವುದು, ರೈತರಿಗೆ ಅಗತ್ಯ ಪರಿಕರ ವಿತರಣೆ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದರೆ ಸಂಘದ ಪ್ರಗತಿ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ನಿರ್ದೇಶಕರು ಚಿಂತನೆ ನಡೆಸಬೇಕು ಎಂದು ರಾಜ್ಯ ತೋಟಗಾರಿಕೆ ಮಹಾಮಂಡಲ ಅಧ್ಯಕ್ಷ ಬಿ.ಡಿ.ಭೂಕಾಂತ್ ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್, ನಿರ್ದೇಶಕರುಗಳಾದ ಶಶಿಧರ ಚುರ್ಚಿಗುಂಡಿ, ಅಗಡಿ ಅಶೋಕ್, ರಮೇಶನಾಯ್ಕ, ಪ್ರೇಮಾ, ಗಿಡ್ಡಪ್ಪ ಮಟ್ಟೇರ್, ಮಲ್ಲೇಶಪ್ಪ, ವೀರನಗೌಡ, ಸಿ.ಪಿ.ಹೆಗಡೆ, ಮುಖಂಡರುಗಳಾದ ಯೋಗೀಶ್ ಹುಲುಗಿನಕೊಪ್ಪ, ಚನ್ನವೀರಪ್ಪ, ಸಣ್ಣ ಹನುಮಂತಪ್ಪ ತೊಗರ್ಸಿ, ಎಸ್.ಎಸ್.ರಾಘವೇಂದ್ರ, ಬೆಣ್ಣೆ ಪ್ರವೀಣ, ಎಸ್.ಎಸ್.ಶಿವರಾಜ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.